ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಛೇರಿ ವಿಟ್ಲ ಇದರ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ಸಂಘದ ವತಿಯಿಂದ ನಡೆದ ಅಂಬೇಡ್ಕರ್ ರವರ ೧೩೦ ನೇ ಜಯಂತಿ ಆಚರಣೆ ಸವಿ ನೆನಪಿಗಾಗಿ ವಿಟ್ಲ ಅಂಗನವಾಡಿಗೆ ಫ್ಯಾನ್ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಯು ವಿಟ್ಲ, ಗಣೇಶ್ ಸೀಗೆಬಲ್ಲೆ, ಮಹಿಳಾ ಘಟಕದ ಉಪಾಧ್ಯಕ್ಷೆ ವಿಮಳ ಮುಳಿಯ, ವಸಂತ ನಾಟೆಕಲ್ಲು, ಶೀನ ಮುಳಿಯ, ವಿಮಲ ಸೀಗೆಬಲ್ಲೆ ಅಂಗನವಾಡಿ ಕಾರ್ಯಕರ್ತೆ ಮೂಕಾಂಬಿಕಾ ಉಪಸ್ಥಿತರಿದ್ದರು.
