ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನೆಯು ನ.೧೯ರಂದು ಶುಕ್ರವಾರ ಏಕಾಹ ಭಜನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ನಾರಾಯಣ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಪೊಳಲಿ ಇವರಿಂದ ಭಜನಾ ಪ್ರಾರಂಭಗೊಂಡು ಮರುದಿನ ಶನಿವಾರ ಬೆಳಗ್ಗಿನವರೇಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.

