Published On: Sat, Nov 20th, 2021

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಾವಿರ ಸೀಮೆಯ ಭಕ್ತರ ಸಮಾಕ್ಷಮದಲ್ಲಿ ನಡೆಯುವ ಅಪ್ಪದಪೂಜೆ.

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವೃಶ್ಚಿಕ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ನಡೆಯುವ ಅಪ್ಪದ ಪೂಜೆಯು ಬಹಳ ವಿಶೇಷತೆಯನ್ನು ಹೊಂದಿದೆ.20appapooje

ಕೃಷಿಯನ್ನು ನಂಬಿಕೊAಡು ಬಂದAತಹ ನಮ್ಮ ಹಿಂದಿನಕಾಲದ ಪೂರ್ವಜರು ಕೃಷಿ ಚಟುವಟಿಕೆಗಳು ನಡೆಯದಿದ್ದಾಗ ಸಾವಿರ ಸೀಮೇಗೆ ಒಳಪಟ್ಟ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿದಾನದಲ್ಲಿ ಗುರಿಕಾರ ಹಾಗೂ ಊರಿನ ಹಿರಿಯರು ಅರ್ಚಕ ಮನೆತನದವರು ಸೇರಿ ದೇವಿಯಲ್ಲಿ ಪ್ರಾರ್ಥಿಸಿ ಕಾಲಕಾಲಕ್ಕೆ ಕೃಷಿ, ಭತ್ತ ಬೆಳೆ ಸರಿಯಾಗಿ ಬೆಳೆದು ಕಠಾವಿಗೆ ಬಂದರೆ ಬೆಳೆದ ಬೆಳೆಯಲ್ಲಿ ಒಂದAಶವನ್ನು ದೇವರಿಗೆ ನೀಡಿ ಅದರಿಂದ ಅಪ್ಪ ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದಾಗಿ ಪ್ರಾರ್ಥಿಸುತ್ತಾರೆ.20 appa thyari

ನಂತರ ಭಕ್ತಾಗಳು ಅವರವರ ಜಮೀನಿನಲ್ಲಿ ಬೆಳೆದ ಒಂದAಶವನ್ನು ದೇವಳಕ್ಕೆ ಒಪ್ಪಿಸಿ ರಸೀದಿ ಪಡೆದು ದೇವರಿಗೆ ನೈವೇಧ್ಯ ಮಾಡಿ ಅಪ್ಪವನ್ನು ಸಮರ್ಪಿಸುತ್ತಿದ್ದರು.ಕೆಲವು ವರ್ಷಗಳಿಂದ ಅಪ್ಪದ ಪೂಜೆಗೆ ವಿವಿಧ ರೀತಿಯ ಅಕ್ಕಿಗಳನ್ನು ಭಕ್ತಾಗಳು ನೀಡುವುದರಿಂದ ಅಪ್ಪ ತಯಾರು ಮಾಡಲು ಕಷ್ಠಕರವಾಗುತ್ತಿತ್ತು ಇದನ್ನರಿತ ಆಡಳಿತ ಮಂಡಳಿಯವರು ಬೆಳ್ತಿಗೆ ಅಕ್ಕಿಯನ್ನು ದೇವಳದ ವತಿಯಿಂದಲೇ ನೀಡುತ್ತಿದ್ದು ಭಕ್ತಾಗಳಿಗೆ ಅನುಕೂಲವಾಗುವಂತೆ ೫೦ ರೂಪಾಯಿಗೆ ಐದು ಅಪ್ಪದಂತೆ ಸಾವಿರ ಸೀಮೇಯ ಹಾಗೂ ಭಕ್ತಾಗಳು ಅವರವರ ಇಚ್ಚಾನುಸಾರದಂತೆ ಒಂದು ಲಕೊಟೆಗೆ ೫೦ ರೂಪಾಯಿಗೆ ರಸೀದಿ ಮಾಡಿ ದೇವರ ಪ್ರಸಾದ ರೂಪವಾಗಿ ಅಪ್ಪವನ್ನು ಭಕ್ತಾಗಳಿಗೆ ನೀಡಲಾಗುತ್ತಿದ್ದು. ಭಕ್ತಾಗಳು ರಸೀದಿ ಮಾಡಿ ದೇವರ ಪ್ರಸಾದವೆಂಬAತೆ ಸ್ವೀಕರಿಸುತ್ತಾರೆ.20 appa 1

* ಭಕ್ತಾಗಳಿಗೆ ೬೫,೦೦೦ ಸಾವಿರ ಅಪ್ಪ

** ತಾಯಾರಿಸಲು ಬೇಕಾದ ಸಾಮಾಗ್ರಿ.

ಅಪ್ಪ ತಾಯಾರಿಸಲು ಬೇಕಾದ ಸಾಮಾಗ್ರಿ ೪೦ ಮುಡಿ ಬೆಳ್ತಿಗೆ ಅಕ್ಕಿ , ೧೩ ಕ್ವಿಂಟಾಲ್ ಬೆಲ್ಲ, ೩೦೦ ಲೀ. ತುಪ್ಪ, ೭೦೦ ತೆಂಗಿನಕಾಯಿ, ೩ ಕೆ.ಜಿ ಏಲಕ್ಕಿ ಬೇಕಾಗುವ ಸಾಮಾಗ್ರಿಗಳು.

20vpappadapooje
ಪೊಳಲಿ ದೇವಳದಲ್ಲಿ ಬಾಣಸಿಗರಾಗಿರುವ ಚಂದ್ರಶೇಖರ ರಾವ್ ನೂಯಿ ಅವರ ೩೫ ಬಾಣಸಿಗರ ತಂಡದಿ0ದ ೬. ಕಾವಲಿಯಲ್ಲಿ ಏಕಕಾಲಕ್ಕೆ ೫೫೦ ಅಪ್ಪ ರಡಿಯಾಗಿ ೧೫ ಗಂಟೆಯಲ್ಲಿ ೬೫ ಸಾವಿರ ಅಪ್ಪ ತಯಾರಿಕೆಯಾಗಿದೆ. ರಾತ್ರಿ ೭ ಗಂಟೆಗೆ ರಂಗಪೂಜೆ ನಂತರ ಸುಬ್ರಹ್ಮಣ್ಯ ದೇವರ ಬಲಿ ಮೂರ್ತಿಗೆ ಅಲಂಕರಿಸಿ ದೇವರನ್ನು ಪೀಠದಲ್ಲಿ ಕುಳ್ಳಿರಿಸಿ ತಯಾರಾದ ಒಂದAಶ ಅಪ್ಪವನ್ನು ಅಡುಗೆ ಶಾಲೆಯಿಂದ ಅಡಳಿತಮಂಡಳಿ ಹಾಗೂ ಅರ್ಚಕರೊಂದಿಗೆ ವಾಧ್ಯಗೋಷ್ಠಿಯೊಂದಿಗೆ ವಿಜೃಂಭಣೆಯಿAದ ತಂದು ದೇವರ ಮಂಟಪದಲ್ಲಿಟ್ಟು ನೈವೇದ್ಯ ನೀಡಿ ಅಪ್ಪದ ಪೂಜೆ ನೆರವೇರಿಸಲಾಯಿತು.

ನೈವೇದ್ಯ ಮಾಡಿದ ಅಪ್ಪವನ್ನು ತಾಯಾರು ಮಾಡಿದ ಅಪ್ಪದೊಂದಿಗೆ ಬೆರೆಸಲಾಗುವುದು. ನಂತರ ಸ್ವಯಂಸೇವಕರು ೫೦ ರೂಪಾಯಿಯ ರಸಿದಿಗೆ ೫ ಅಪ್ಪದಂತೆ ಲಕೋಟೆಗೆ ತುಂಬಿಸುತ್ತಾರೆ. ನಂತರ ದೇವರ ಉತ್ಸವ ಬಲಿ ಹೊರಟು ಪೀಠ ಪೂಜೆ ನಡೆದ ಬಳಿಕ ವಿಜೃಂಭಣೆಯಿAದ ಬಲಿ ಉತ್ಸವ ನಡೆಯುತ್ತದೆ. ಸಾವಿರ ಸೀಮೆಯ ಗುರಿಕಾರ ಅಡಳಿತ ಮುಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ ಬ್ರಹ್ಮಾರ್ಪಣೆ ಬಿಟ್ಟು ಪ್ರಸಾದ ವಿತರಿಸಲಾಗುತ್ತದೆ. ಸಾವಿರ ಸೀಮೆಯ ಭಕ್ತಾಗಳು ಅಪ್ಪ ಸ್ವೀಕರಿಸುತ್ತಾರೆ.

ದೇವಳದ ಪ್ರ. ಅರ್ಚಕ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಕೆ. ರಾಮ್ ಭಟ್ ,ಸುಬ್ರಹ್ಮಣ್ಯ ತಂತ್ರಿ,ವೆAಕಟೇಶ್ ತಂತ್ರಿ ಅನುವಂಶಿಕ ಮೊಕ್ತೆಸರರಾದ ಡಾ.ಮಂಜಯ್ಯ ಶೆಟ್ಟಿ, ಯು.ತಾರಾನಾಥ ಆಳ್ವ, ಚೇರ ಸೂರ್ಯ ನಾರಾಯಣ ರಾವ್,ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ ಹಾಗು ಸಾವಿರ ಸೀಮೆಯ ಭಕ್ತಾಗಳು ಉಪಸ್ಥಿತರಿರುವರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter