ವಿಟ್ಲ: ಪಡ್ನೂರು ಗ್ರಾಮದ ಅರಳೀವೃಂದ ಕಡಂಬು ಶ್ರೀ ವೆಂಕಟರಮಣ ಭಜನಾ ಮಂದಿರವನ್ನು ಪುನರ್ ನಿರ್ಮಾಣ ಮಾಡಲಿದ್ದು ಅದರ ಜೀರ್ಣೋದ್ಧಾರ ಸಮಿತಿಯನ್ನು ಹಲವು ದೈವ ದೇವಸ್ಥಾನಗಳ ಜೀರ್ಣೋದ್ಧಾರ ನೇತೃತ್ವ ವಹಿಸಿದ್ದ ಸತೀಶ್ ಆಳ್ವ ಇರಾ ಬಾಳಿಕೆ ಇವರ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಜಗನ್ನಾಥ ಕಾಸರಗೋಡು, ರವೀಶ್ ಶೆಟ್ಟಿ ಕರ್ಕಳ, ಎಂ ಡಿ ವೆಂಕಪ್ಪ, ಜಿ ಎನ್ ನೋಣಯ್ಯ, ಅರವಿಂದ ರೈ, ಸಂದೇಶ್ ಶೆಟ್ಟಿ, ನಾರಾಯಣ ಭಟ್, ರಮೇಶ್ ಕಡಂಬು, ಜಿ ಎನ್ ಆನಂದ, ಚೆನ್ನಪ್ಪ ಅಳಿಕೆ ಹಾಗೂ ಕಡಂಬು ಗ್ರಾಮಸ್ಥರು ಉಪಸ್ಥಿತರಿದ್ದರು.
