Published On: Mon, Nov 15th, 2021

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಪುತ್ತೂರು : ಪ್ರಕೃತಿಯು ನಮಗೆ ನೀಡಿರುವ ಕೊಡುಗೆಗಳನ್ನು ವಿಕೃತಿ ಗೊಳಿಸದೆ ಉಳಿಸುವುದು ಎಲ್ಲರ ಕರ್ತವ್ಯ. ಪರಿಸರದ ಉಳಿವಿನಲ್ಲಿ ನಮ್ಮೆಲ್ಲರ ಹಿತ ಅಡಗಿದೆ. ಋತುಮಾನಕ್ಕೆ ಅನುಸಾರವಾಗಿ ನಾವು ಆಚರಿಸುವ ಹಬ್ಬ ಹರಿ-ದಿನಗಳು ಇದೇ ಸಂದೇಶವನ್ನು ನಮಗೆ ನೀಡುವುದೆಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ತಿಳಿಸಿದರು.WhatsApp Image 2021-11-15 at 4.00.46 PM

ಪುತ್ತೂರು ಕೊಂಬೆಟ್ಟು ಸೌಜನ್ಯ ನಿವಾಸದಲ್ಲಿ ಜರುಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ( ರಿ) ಮೆಲ್ಕಾರ್ ಇದರ ಮಾಸಿಕ ಸಭೆಯಲ್ಲಿ ವಿಶೇಷ ಮಾಹಿತಿ ನೀಡಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವ ಅಧ್ಯಕ್ಷ ಪ್ರೊ ಎ. ವಿ. ನಾರಾಯಣ ಮತ್ತು ಪ್ರತಿಷ್ಠಾನದ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಪ್ರೊ. ವತ್ಸಲಾ ರಾಜ್ಞಿ ದೀಪ ಬೆಳಗಿಸಿ ಶುಭ ಹಾರೈಸಿದರು.

ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ಟರು ಅಳಿಕೆ ಸತ್ಯಸಾಯಿ ಸೇವಾ ವಿಹಾರದಲ್ಲಿ ಡಿಸೆಂಬರ್ 18ಕ್ಕೆ ನಡೆಯಲಿರುವ ಪ್ರತಿಷ್ಠಾನದ ಉದ್ಘಾಟನೆ ಮತ್ತು ಹಿರಿಯರ ಸಮಾವೇಶದ ರೂಪುರೇಷೆಗಳನ್ನು ನೀಡಿದರು.

ನಿವೃತ್ತ ಆರೋಗ್ಯಾಧಿಕಾರಿ ಡಾ. ರಂಗಯ್ಯ ಸುಳ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ವಿಧಾಯಕ ಕಾರ್ಯಕ್ರಮಗಳು ಪ್ರತಿಷ್ಠಾನದ ವತಿಯಿಂದ ನಡೆಯಲು ಎಲ್ಲರ ಸಹಕಾರ ಲಭಿಸಲಿ ಎಂದರು.

ವೇದಿಕೆಯಲ್ಲಿ ನಿವೃತ್ತ ಅರಣ್ಯಾಧಿಕಾರಿ ಸದಾಶಿವ ಭಟ್ ಕಡಬ, ಬಾಲಕೃಷ್ಣ ಬೋರ್ಕರ್ ಕೋಡಿಂಬಾಡಿ, ಸೀತಾರಾಮ ಶೆಟ್ಟಿ ಬೆಳ್ತಂಗಡಿ, ಎಂ. ಆರ್ ವಾಸುದೇವ ಮಂಗಳೂರು, ಕಾನ ಈಶ್ವರ ಭಟ್, ನ್ಯಾಯವಾದಿ ಯನ್.ಕೆ ಜಗನ್ನಿವಾಸ ರಾವ್ ಪುತ್ತೂರು, ಸಹಕಾರ್ಯದರ್ಶಿ ಡಾ. ಮಹಾಲಿಂಗ ಭಟ್ ಉಪಸ್ಥಿತರಿದ್ದರು.

ವಸಂತ ಸುವರ್ಣ ಬೆಳ್ತಂಗಡಿ, ಜಯರಾಮ ಭಂಡಾರಿ ಧರ್ಮಸ್ಥಳ, ಜಯಾನಂದ ಪೆರಾಜೆ, ರಾಜಮಣಿ ರಾಮಕುಂಜ, ಭಾಸ್ಕರ ಬಾರ್ಯ, ಜಯರಾಮ ಪೂಜಾರಿ, ಸಂತೋಷ ಮಂಗಳೂರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವಿವಿಧ ತಾಲ್ಲೂಕುಗಳನ್ನು ಪ್ರತಿನಿಧಿಸಿದ ಗೋಪಾಲಕೃಷ್ಣ ಭಟ್ ಬಿಳಿನೆಲೆ, ಶಿವಸುಬ್ರಹ್ಮಣ್ಯ, ಜೆಪಿ ಸೈಮನ್, ಸೂರ್ಯನಾರಾಯಣ ಭಟ್, ಅಶೋಕ್, ಸುಬ್ಬರಾವ್, ಮಹಾಲಿಂಗ ಪಾಟಳಿ, ಬಾಲಕೃಷ್ಣ ರಾವ್, ಅನಾರು ಕೃಷ್ಣಶರ್ಮ, ಶ್ರೀಮತಿ ಲೀಲಾವತಿ, ಶ್ರೀಮತಿ ಜಯಮ್ಮ ಮೊದಲಾದವರು ಪಾಲ್ಗೊಂಡಿದ್ದರು.

ಪವನ್ ಪುತ್ತೂರು ಪ್ರಾರ್ಥಿಸಿದರು. ಪ್ರತಿಷ್ಠಾನದ ಟ್ರಸ್ಟಿ ಲೋಕೇಶ ಹೆಗ್ದೆ ಪುತ್ತೂರು ಸ್ವಾಗತಿಸಿ ದುಗ್ಗಪ್ಪ. ಯನ್ ವಂದಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಈ ಮಾಸಿಕ ಸಭೆಯ ಆತಿಥ್ಯವನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಎ.ವಿ. ನಾರಾಯಣ ವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter