ಪೊಳಲಿ: ಸರಕಾರದ ಆದೇಶದಂತೆ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯದಲ್ಲಿ ಗೋಪೂಜೆ ನಡೆಸಬೇಕೆಂದು ಸೂಚನೆ ನೀಡಲಾಗಿದ್ದು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಾಲಯದಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬಲಿಪಾಡ್ಯ ದಿನದಂದು ಶುಕ್ರವಾರ ಗೋಪೂಜೆ ವಿಧಿವಿಧಾನಗಳು ನಡೆದವು.6vp polali gopooje

ಗೋವುಗಳಿಗೆ ಸ್ನಾನ ಮಾಡಿಸಿ ಅರಶಿನ ಕುಂಕುಮ ಹೂವುಗಳಿಂದ ಅಲಂಕರಿಸಿ ಅವಲಕ್ಕಿ ಬೆಲ್ಲ ಮುಂತಾದ ಸಿಹಿ ತಿನಿಸುಗಳನ್ನು ಹಸುಗಳಿಗೆ ನೀಡಿ ಗೋದೋಳಿ ಲಗ್ನದಲ್ಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಅರ್ಚಕರು ಮಾದವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್ ಪೂಜೆ ನೆರವೇರಿಸಿದರು.

6vp go pooje
ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಯು.ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *