ಕೈಕಂಬ: ದ.ಕ.ಜಿ.ಪಂ, ಮಂಗಳೂರು ತಾಪಂ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಹಂತ-೨ ಕಾರ್ಯಕ್ರಮದಡಿ ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ‘ಬಯಲು ಬಹಿರ್ದೆಸೆ ಮುಕ್ತ(ಒಡಿಎಫ್) ಪ್ಲಸ್’ ಎಂದು ಘೋಷಿಸುವ ಬಗ್ಗೆ ಗ್ರಾಮ ಪಂಚಾಯತ್ ಮಟ್ಟದ ತರಬೇತಿ ಕಾರ್ಯಾಗಾರ ನಡೆಯಿತು04ದ.ಕ.ಜಿ.ಪಂ ಸ್ವಚ್ಛ ಭಾರತ್ ಮಿಷನ್(ಗ್ರಾ) ಇದರ ಮಾಹಿತಿ ಶಿಕ್ಷಣ ಮತ್ತು ಸಂವಹನ ಜಿಲ್ಲಾ ಸಂಯೋಜಕ ಡೊಂಬಯ್ಯ ಇಡ್ಕಿದು ಮಾತನಾಡಿ, ಸ್ವಚ್ಛ ಭಾರತ್ ಮಿಷನ್‌ನಡಿ ನಡೆಯುವ ಈ ಕಾರ್ಯಕ್ರಮದಲ್ಲಿ ಗ್ರಾಮಗಳ ಪ್ರತಿಯೊಂದು ಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಗಳಲ್ಲಿ ಶೌಚಾಲಯ, ಸಾರ್ವಜನಿಕ ಶೌಚಾಲಯ, ಒಣ ಕಸ ಸಂಗ್ರಹ ಹಾಗೂ ಕೇಂದ್ರ ಘಟಕಕ್ಕೆ ಸಾಗಾಟ, ಹಸಿ ಕಸ ಗೊಬ್ಬರವಾಗಿ ಪರಿವರ್ತಿಸುವುದು, ಮನೆಗಳ ತ್ಯಾಜ್ಯ ಕೊಳಚೆ(ತ್ಯಾಜ್ಯ) ನೀರು ನಿರ್ವಹಣೆ, ಇಂಗುಗುoಡಿ ರಚನೆ, ಸ್ವಚ್ಚತಾ ಯೋಜನೆಗಳಿಗೆ ಜಿಪಂ/ತಾ.ಪ. ಮತ್ತು ಪಂಚಾಯತ್ ಮೂಲಕ ಸರ್ಕಾರದ ನೆರವು ಇವೇ ಮೊದಲಾದ ವಿಷಯದಲ್ಲಿ ಮಾಹಿತಿ ನೀಡಿದರು.03

02

ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಅಬೂಬಕ್ಕರ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಎ, ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.01

By suddi9

Leave a Reply

Your email address will not be published. Required fields are marked *