ಕೈಕಂಬ : ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಕ್ಕೆ ಮಾಡಿರುವ ಸಂಕಲ್ಪದಂತೆ ಶ್ರೀದುರ್ಗೆಶ್ವರಿ ದೇವಿ ಮತ್ತು ಮಹಾಗಣಪತಿ ದೇವರ ಮೂರ್ತಿಗಳನ್ನು ಭಾನುವಾರ ಬೆಳಿಗ್ಗೆ ಬಾಲಾಲಯದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಗರ್ಭಗುಡಿಯ ಜೀರ್ಣೋದ್ದಾರಕ್ಕೆ ಶಾಸ್ತ್ರೋಕ್ತವಾಗಿ ವಿದ್ಯುಕ್ತ ಚಾಲನೆ ನೀಡಲಾಯಿತು.

ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿ ಎಡಪದವು ಇವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಸದಾಶಿವ ಕಾರಂತ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಹಾಗೂ ಕ್ಷೇತ್ರದ ಕೊಡಮಣಿತ್ತಾಯ ದೈವವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಮಾತನಾಡಿ ಭಕ್ತರ ಸಹಕಾರದಿಂದ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯಲಿದ್ದು, ಭಕ್ತಭಾಂಧವರು ತಮ್ಮಿಂದಾದ ರೀತಿಯಲ್ಲಿ ಸಹಕಾರ ನೀಡುವುದರ ಜತೆಯಲ್ಲಿ ಕರಸೇವೆಯಲ್ಲಿ ಭಾಗವಹಿಸಿ ದೇವಸ್ಥಾನ ಜೀರ್ಣೋದ್ದಾರದ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ಕೋರಿದರು. ದುರ್ಗೇಶ್ವರಿ ಸೇವಾ ಸಮಿತಿಯ ಕಾರ್ಯದರ್ಶಿ ಶಿವರಾಮ್ ಕಾರಂತ ಜೀರ್ಣೋದ್ದಾರ ಕಾರ್ಯ ಮತ್ತು ನಿಧಿಸಂಗ್ರಹದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಅಗರಿ, ಟ್ರಸ್ಟಿಗಳಾದ ತುಳಸೀದಾಸ್ ಅಮೀನ್, ಪುರುಷೋತ್ತಮ್ ಕೆ. ಉಮೇಶ್ ಅಮೀನ್ ನಾಗಂದಡಿ, ಶ್ರೀಮತಿ ವಸಂತಿ, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರುಗಳಾದ ದಾಮೋದರ್ ಮೆಂಡ, ರಾಮಚಂದ್ರ ಸಾಲಿಯಾನ್ ತಾಳಿಪಾಡಿ, ಸಮಿತಿಯ ಕಾರ್ಯದರ್ಶಿ ಅರ್ಜುನ್ ಪಂಡಿತ್, ದುರ್ಗೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಸದಸ್ಯ ಪ್ರವೀಣ್ ಆಳ್ವ ಗುಂಡ್ಯ,ಮುಖಂಡರುಗಳಾದ ಸಂಜೀವ ಶೆಟ್ಟಿ, ರಾಮಣ್ಣ ನಾಯ್ಕ್ ಕಿಲೆಂಜಾರು, ವಿಕ್ರಂ ಭಟ್ ಕುಪ್ಪೆಪದವು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವರಾಮ ಕಾರಂತ್ ಸ್ವಾಗತಿಸಿ ನಿರೂಪಿಸಿದರು, ಉದಯ ಕುಮಾರ್ ಚಂದ್ರಮಜಲು ವಂದಿಸಿದರು.
