ಮೂಡುಬಿದಿರೆ: ಭೂಗತ ಪಾತಕಿಗಲೊಂದಿಗೆ ನಂಟು ಹಾಗೂ ಮಾರಕಾಸ್ತ್ರಗಳನ್ನು ತನ್ನಲ್ಲಿ ಇಟ್ಟುಕೊಂಡಿದ್ದ, ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕೋಟೆಬಾಗಿಲು ನಿವಾಸಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.WhatsApp Image 2021-11-01 at 11.00.06 AM

ಮುಂಬೈ ಪ್ರಕರಣವೊಂದರ ಆರೋಪಿಯಾಗಿದ್ದ ಪ್ರವೀಣ್ ಕುಮಾರ್ (46) ಆರೋಪಿ. ಇಬ್ಬರು ಪೊಲೀಸ್ ಸಿಬ್ಬಂದಿಗಳು ಆರೋಪಿಯ ಮನೆಯ ಬಳಿ ಹೋದಾಗ ಸಮವಸ್ತ್ರ ದಲ್ಲಿದ್ದ ಸಿಬ್ಬಂದಿಗಳನ್ನು ನೋಡಿ ಆತನು ಓಡಿಹೋಗಲು ಪ್ರಯತ್ನ ಪಟ್ಟಿದ್ದ. ಆಗ ಆತನನ್ನು ಹಿಡಿಯಲು ಹೋದಾಗ ಆರೋಪಿಯು ಪೊಲೀಸ್ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ತಪ್ಪಿಸಿಕೊಳ್ಳಲು ಪ್ರಯತ್ನಸಿದ್ದಾನೆ. ಪೊಲೀಸರು ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

By suddi9

Leave a Reply

Your email address will not be published. Required fields are marked *