ಮೂಡುಬಿದಿರೆ: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮೂಡುಬಿದಿರೆಯ ಮೂವರು ಆಯ್ಕೆಯಾಗಿದ್ದಾರೆ. ಮೂಡುಬಿದಿರೆ ಪುತ್ತಿಗೆ ಗ್ರಾಮ ಮುರ್ಕತ್‍ಪಲ್ಕೆ ನಿವಾಸಿ, ಕಳೆದ ಐವತ್ತು ವರ್ಷಗಳಿಂದ ತಾಸೆ ವಾದಕರಾಗಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಅಪಾರ ಶಿಷ್ಯವರ್ಗವನ್ನು ಹೊಂದಿರುವ ಅಣ್ಣಿ ಸುವರ್ಣ, ವಾದ್ಯ ಸಂಗೀತದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾದಸ್ವರ ವಾದಕ, ಬಡಗಮಿಜಾರು ನಿವಾಸಿ ಎ.ಕೆ ಉಮಾನಾಥ ದೇವಾಡಿಗ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಹದಾಡ್ರ್ಯ ಸ್ಪರ್ಧಿ, 20 ವರ್ಷಗಳಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಂಟಾಲ್ಕಟ್ಟೆ ನಿವಾಸಿ ಅನಿಲ್ ಮೆಂಡೋನ್ಸಾ ಅವರು ಪ್ರಸಕ್ತ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.WhatsApp Image 2021-10-31 at 9.06.05 AM

By suddi9

Leave a Reply

Your email address will not be published. Required fields are marked *