ಮೂಡುಬಿದಿರೆ: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಜಾಗೃತಿ ಅರಿವು ಸಪ್ತಾಹ 2021 ಕಾರ್ಯಕ್ರಮವು ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆಯಿತು.WhatsApp Image 2021-10-28 at 3.57.19 PM

ಕರ್ನಾಟಕ ಲೊಕಾಯುಕ್ತದ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಉದ್ಘಾಟಿಸಿ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಲೋಕಾಯುಕ್ತ, ಎಸಿಬಿ, ವಿಚಕ್ಷಣಾ ದಳದವರು ಕೇಸು ದಾಖಲಿಸುವುದರಿಂದಷ್ಟೇ ಸಾಧ್ಯವಿಲ್ಲ. ಜನರು ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಬೇಕು. ಸರ್ಕಾರಿ ಅಧಿಕಾರಿಗಳೂ ಬದ್ಧರಾಗಿರಬೇಕು. ಅಧಿಕಾರಿಗಳು ಕರ್ತವ್ಯದಲ್ಲಿ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಯಾವುದೇ ದೂರು ಅರ್ಜಿಗಳಿಗೆ ಹೆದರದೆ ನಿರ್ಭೀತಿಯಿಂದ ಕೆಲಸ ಮಾಡಿ ಎಂದರು.

ತಹಸೀಲ್ದಾರ್ ಪುಟ್ಟರಾಜು, ಪುರಸಭೆ ಮುಖ್ಯಾಧಿಕಾರಿ ಇಂದು . ತಾ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಕರ್ನಾಟಕ ಲೋಕಾಯುಕ್ತದ ಉಪಾಧೀಕ್ಷಕರಾದ ಕಲಾವತಿ ಕೆ. ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದರು. ಕೇಶವ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *