ಮೂಡುಬಿದಿರೆ: ನಿಡ್ಡೋಡಿ ಗ್ರಾಮದ ಕಲ್ಲಕುಮೇರಿನಲ್ಲಿ ಶುಕ್ರವಾರ ಮಧ್ಯಾಹ್ನ ಹಾಡುಹಗಲಲ್ಲೇ ಮನೆಯ ಬಾಗಿಲು ಮುರಿದು ಕಳವಿಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.WhatsApp Image 2021-10-23 at 2.05.49 PM

ಬಂಧಿತ ಆರೋಪಿಯನ್ನು ಕಾಪು ಸಮೀಪದ ಪಾಕಿರಣಕಟ್ಟೆಯ ಪ್ರಭಾಕರ ಅವರ ಪುತ್ರ ಸುದರ್ಶನ್ ಎಂದು ಗುರುತಿಸಲಾಗಿದೆ. ಈತ ಕಲ್ಲಕುಮೇರು ನಿವಾಸಿ ಸನತ್ ಶೆಟ್ಟಿ ಅವರ ಮನೆಯ ಹಿಂಬಾಗಿಲು ಮುರಿದು ಕಳವಿಗೆ ಯತ್ನಿಸಿದ್ದ. ಈ ಸಮಯ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮನೆಯ ಓರ್ವ ಸದಸ್ಯ ಪೇಟೆಯಲ್ಲಿ ಕ್ಷೌರ ಮುಗಿಸಿ ಮನೆಗೆ ಸ್ನಾನಕ್ಕೆಂದು ಬಂದಾಗ ಕಳ್ಳ ಒಳಗಿರುವುದು ಗಮನಕ್ಕೆ ಬಂದಿದ್ದು ಆತ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *