ಬಂಟ್ವಾಳ: ಕುತ್ತಿಲ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಆನುವಂಶಿಕ ಆಡಳಿತ ಮೊಕ್ತೇಸರ ಕುತ್ತಿಲ ಗುರುದಾಸ್ ಕರ್ಕೇರ( 63) ಅವರು ಅನಾರೋಗ್ಯ ದಿಂದ ಅ.22ರಂದು ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.WhatsApp Image 2021-10-22 at 10.03.44 AMಮಂಗಳೂರು ನಲ್ಲಿ ಕರ್ಕೇರಾ ಟ್ರೇಡಿಂಗ್ ಸೆಂಟರ್ ನಡೆಸುತ್ತಿದ್ದ ಗುರುದಾಸ್ ಅವರು ಉದ್ಯಮ ವಲಯದಲ್ಲಿ ಗುರುತಿಸಿಕೊಂಡಿದ್ದರು. ಧಾರ್ವಿಕ ಕ್ಷೇತ್ರದ ಮುಂದಾಳುವಾಗಿದ್ದ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕೊಡುಗೈದಾನಿಯಾಗಿ ಜನಾನುರಾಗಿಯಾಗಿದ್ದರು.

ಕುತ್ತಿಲ ಗರಡಿಯ ಜೀರ್ಣೋದ್ಧಾರ, ವಾರ್ಷಿಕ ಜಾತ್ರೋತ್ಸವಗಳನ್ನು ವಿಜೃಂಭಣೆಯಿಂದ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಕರ್ಕೇರ ಅವರು ಗುತ್ತಿನ ಮನೆಯ ಪಟ್ಟಿದಾರರಾಗಿದ್ದು, ಸಂಜೆ 4.30 ಕ್ಕೆ ಕುತ್ತಿಲ ನಿವಾಸದಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ಅಂತಿಮದರ್ಶನ ಬಳಿಕ ಅಂತಿಮ ಸಂಸ್ಕಾರ ನಡೆಯಲಿದೆ.

By suddi9

Leave a Reply

Your email address will not be published. Required fields are marked *