ಮುಂಬಯಿ: ಉಡುಪಿ ಜಿಲ್ಲೆಯ ಕೋಡ್ದಬ್ಬು ದೈವವನ್ನು ಬಾಲ್ಯದಲ್ಲಿ ಸಾಕಿ ಸಲಹಿದ ತೋನ್ಸೆ ಕೋಡಿ ಕಂಡಾಳ ಕೊಡಂಗೆ ಬನ್ನಾರ್ ವಂಶಸ್ಥರು, ಕೋಡಿ ಕಂಡಾಳ ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ ಶೆಟ್ಟಿ ಅವರ ಹಿರಿಯ ಸಹೋದರಿ ತೋನ್ಸೆ ಗ್ರಾಮದ ಹಿರಿಯ ಚೇತನ ಶ್ರೀಮತಿ ಸೀತಮ್ಮ ಶೆಟ್ಟಿ (92.) ಅ.20ರಂದು ಬುಧವಾರ ಬೆಳಿಗ್ಗೆ ತನ್ನ ಉಡುಪಿ ತೋನ್ಸೆ ಅಲ್ಲಿನ ಸ್ವಗೃಹದಲ್ಲಿ ನಿಧನರಾದರು.
ಪಾಂಗಳ ಶೀನಪ್ಪ ಶೆಟ್ಟಿ (ದಿವಂಗತರು) ಅವರ ಧರ್ಮಪತ್ನಿ ಆಗಿದ್ದ ಮೃತರು ಕಲಾಜಗತ್ತು ಮುಂಬಯಿ ಸಮೂಹ ಸಂಸ್ಥೆಗಳ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಿಮ್ಕಾ ಬುಕ್ ದಾಖಲೆಯ ತೋನ್ಸೆ ವಿಜಯ ಕುಮಾರ್ ಶೆಟ್ಟಿ (ಸುಪುತ್ರ) ಮತ್ತು ಇಬ್ಬರು ಸುಪುತ್ರಿಯರನ್ನು ಅಗಲಿದ್ದಾರೆ.