Published On: Sat, Oct 16th, 2021

ಮೂಡುಬಿದಿರೆ: ಶಾಸಕರ ತೇಜೋವಧೆ: ಬಿಜೆಪಿ ಲ ಮಂಡಲದಿಂದ ಖಂಡನೆ

ಮೂಡುಬಿದಿರೆ: ಶಾಸಕ ಉಮಾನಾಥ ಕೋಟ್ಯಾನ್ ಅವರ ಬಗ್ಗೆ ರಾಜಕೀಯ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ-ಸುದ್ದಿ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿರುವುದನ್ನು ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲವು ಖಂಡಿಸುತ್ತದೆ ಎಂದು ಮಂಡಲದ ಅಧ್ಯಕ್ಷ ಸುನಿಲ್ ಆಳ್ವ ತಿಳಿಸಿದ್ದಾರೆ.WhatsApp Image 2021-10-16 at 9.14.39 AMಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಬಗ್ಗೆ ನ್ಯಾಯವಾಧಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಮಧ್ಯಂತರ ಜಾಮೀನನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ಪೊಲೀಸರು ರಾತ್ರಿ 8.20ರ ವೇಳೆಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಅಪಾದಿತರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಿದಾಗ ಮಧ್ಯಂತರ ಜಾಮೀನಿನಲ್ಲಿ ಶರ್ತವನ್ನು ವಿಧಿಸಿ ಬಿಡುಗಡೆಗೊಳಿಸಿರುತ್ತಾರೆ.

ಶಾಸಕ ಉಮಾನಾಥ ಕೋಟ್ಯಾನ್ ಸಮಯೋಚಿತವಾಗಿ, ಕಾನೂನಾತ್ಮಕವಾಗಿ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಸಂಘಟನೆಯ ಕಾರ್ಯಕರ್ತರ ಭಾವನೆಗೆ ಪೂರಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಠಾಣೆಗೆ ತೆರಳಿ ಕಾರ್ಯಕರ್ತರಿಗೆ ಸಾಂತ್ವಾನ ಹೇಳಿದ್ದಾರೆ. ಆದರೆ ಇದನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಸತ್ಯವನ್ನು ಮರೆಮಾಚಿ ಶಾಸಕರು ಪೊಲೀಸರ ಮೇಲೆ ಒತ್ತಡ ಹೇರಿ, ಕಾನೂನಿಗೆ ವಿರುದ್ಧವಾಗಿ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ.ಕೃಷ್ಣರಾಜ ಹೆಗ್ಡೆ, ಮಂಡಲ ಉಪಾಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪ್ರ.ಕಾರ್ಯದರ್ಶಿಗಳಾದ ಗೋಪಾಲ ಶೆಟ್ಟಿಗಾರ್ ಮತ್ತು ಕೇಶವ ಕರ್ಕೇರಾ, ಮಂಡಲದ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter