ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಎರಡಂತಸ್ತಿನ ಮನೆಯೊಂದು ನಿನ್ನೆ ಮಂಗಳವಾರ ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ.
ಎಡಪದವು ನಿವಾಸಿ ರಂಜಿತ್ ಎಂಬವರು ಎರಡು ವರ್ಷದ ಹಿಂದೆ ಪೊಳಲಿಯ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತಯ ಸಮೀಪದ ನಿವೇಶನ ಖರೀದಿಸಿ ಮನೆ ನಿರ್ಮಾನಮಾಡಲು ಪ್ರಾರಂಭಿಸಿದ್ದರು. ಎರಡು ಅಂತಸ್ತಿನ ಮನೆ ಇದಾಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿತ್ತು. ಮಂಗಳವಾರ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ ಕುಸಿದು ಧರಾಶಾಹಿಯಾಗಿದೆ. ಕುಸಿತದ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕುಸಿದು ಬಿದ್ದ ಮನೆಯನ್ನು ನೋಡಲು ದೂರದೂರಿಂದ ಜನರು ದಾವಿಸುತ್ತಿದ್ದರು.

*ನಿವೇಶಕ್ಕೆ ಅರ್ಜಿಕೊಟ್ಟ ಕೂಡಲೇ ದಾಖಲೆಪತ್ರಗಳನ್ನು ಪರಿಶೀಲಿಸಿ ಸಾಮಾನ್ಯ ಸಭೆಯಲ್ಲಿ ಇಟ್ಟು ಅನುಮತಿಯನ್ನು ಕೊಡುತ್ತೇವೆ. ಕಾನೂನಿನಲ್ಲಿ ಅವಕಾಶಗಳಿದ್ದರೆ ಕುಸಿದ ಮನೆಗೆ ಪರಿಹಾರ ಒದಗಿಸಿ ಕೊಡುವ ಪ್ರಯತ್ನ ಮಾಡಲಾಗುವುದು.
ಕರಿಯಂಗಳ ಗ್ರಾಂ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ
