ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯ ಯಕ್ಷಕಲಾ ಪೊಳಲಿಯ ೨೬ನೇ ವರ್ಷದ ವರ್ದಂತ್ಯುತ್ಸವವು ಅ.೯ರಂದು ಶನಿವಾರ ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಜರಗಿತು. ವೇದಮೂರ್ತಿ ಶ್ರೀ ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕ್ಷೇತ್ರ ಪೊಳಲಿಯ ಪ್ರಧಾನ ಅರ್ಚಕರಾದ ರಾಮ್ ಭಟ್ ಪೊಳಲಿ ಹಾಗೂ ನಾರಾಯಣ ಭಟ್ ಪೊಳಲಿ ಇದರ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಬಂಟ್ವಾಳ ತಾಲೂಕು ಭಾ.ಜ.ಪದ ಅಧ್ಯಕ್ಷ ದೇವಪ್ಪ ಪೂಜಾರಿ, ಶುಭಲಕ್ಷಿö್ಮÃ ಟ್ರಾವೆಲ್ಸ್ ನ ಮಾಲಕ ಭುವನೇಶ್ ಪಚ್ಚಿನಡ್ಕ. ರಾಮಕೃಷ್ಣ ತಪೋವನದ ಜ್ಞಾನಪ್ರದಾನಂದಜಿ ಸ್ವಾಮೀಜಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಕೀರ್ತಿ ಶೇಷರಾದ ದಿ| ಶ್ರೀಧರ ಭಂಡಾರಿ ಪುತ್ತೂರು ಇವರ ಸಂಸ್ಮರಣೆ ಮಾಡಲಾಯಿತು. ಹಿರಿಯ ಪ್ರಸಿದ್ಧ ಕಲಾವಿದರಾದ ಮುಳಿಯಾಳ ಭೀಮ ಭಟ್, ತಾರನಾಥ ವರ್ಕಾಡಿ, ಶಶಿಕಾಂತ ಶೆಟ್ಟಿ ಕಾರ್ಕಳ, ಕೃಷ್ಣ ಪ್ರಕಾಶ್ ಉಳಿತ್ತಾಯ , ಗಿರೀಶ್ ಕಕ್ಕೆಪದವು ಇವರುಗಳನ್ನು ಸಂಮಾನಿಸಲಾಯಿತು. ಯುವಗಾಯಕರಾದ ಮನೀಶ್ ಕುತ್ತಾರ್ ಕು||ಚೈತ್ರ ಕಲ್ಲಡ್ಕ ಇವರನ್ನು ಗೌರವಿಸಲಾಯಿತು. ಲ| ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಯಕ್ಷಕಲಾ ಪೊಳಲಿಯ ಸಂಚಾಲಕ ವೆಂಕಟೇಶ್ ನಾವಡ ಪೊಳಲಿ, ಸಂಸ್ಥಾಪಕ ಅ.ನ.ಭ ಪೊಳಲಿ ಹಾಗೂ ಸದಸ್ಯರಾದ ಮೋಹನ್ ಬಿಲ್ವಪತ್ರೆ, ಲೋಕೇಶ್ ಭರಣಿ, ಯಶವಂತ ಕೋಟ್ಯಾನ್ ಪೊಳಲಿ, ನವೀನ್ ಕಟ್ಟಪುಣಿ, ಸುಭಾಸ್ ಹೊಳ್ಳ, ಅಕ್ಷಯ್ ನಾವಡ ಪೊಳಲಿ ಉಪಸ್ಥಿತರಿದ್ದರು. ಬಿ. ಜನಾರ್ಧನ ಅಮುಂಜೆ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕಲಿ ಕೀಚಕ-ಮಹಾ ಬ್ರಾಹ್ಮಣ ಯಕ್ಷಗಾನ ಬಯಲಾಟ ಜರಗಿತು.




