ಕೈಕಂಬ : ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಿದಾಗ ಅವರು ತೋರಿಸುವ ಪ್ರೀತಿ, ವಿಶ್ವಾಸವನ್ನು ಅಲೆಯುವುದು  ಅಸಾಧ್ಯ, ಮೂರ್ನಾಲ್ಕು ಲಕ್ಷ ಅನುದಾನ ನೀಡಿ ರಿಕ್ಷಾ ಪಾರ್ಕ್ ಮಾಡಿ ಕೊಟ್ಟರೆ ವಾಪಾಸ್ ರಿಕ್ಷಾ ಚಾಲಕರು ತೋರಿಸುವ ಪ್ರೀತಿ ನಾಲ್ಕುನೂರು ಕೋಟಿಗಿಂತಲೂ ಹೆಚ್ಚಿನದ್ದು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.ಅವರು  ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ಎಡಪದವಿನಲ್ಲಿ ನಿರ್ಮಿಸಲಾದ ನೂತನ ರಿಕ್ಷಾ ಪಾರ್ಕ್ ನ್ನು ಬುಧವಾರ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.20210929_162948ಸಮಾಜದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುವ ರಿಕ್ಷಾ ಚಾಲಕರು ಸಾರ್ವಜನಿಕರನ್ನು ಸುರಕ್ಷಿತವಾಗಿ ಮನೆಸೇರಿಸುವ ಜವಾಬ್ದಾರಿಯುತವಾದ  ಕಾರ್ಯನಿರ್ವಹಿಸುತ್ತಿದ್ದು ಅವರ ಕೆಲಸ ಅನನ್ಯ ಎಂದರು.ಪಾರ್ಕ್ ನ ಹಿರಿಯ ರಿಕ್ಷಾ ಚಾಲಕ ಹರೀಶ್ ಕೊಟ್ಟಾರಿಯವರನ್ನು ಶಾಸಕರು ಈ ವೇಳೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.  ಶ್ರೀರಾಮ ಆಟೋ ಚಾಲಕ ಮತ್ತು ಮಾಲಕರ ಸಂಘದ ಪರವಾಗಿ ಶಾಸಕರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.20210929_163238

 ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷೆ ಪ್ರೇಮಾ, ಪಂಚಾಯತ್ ಸದಸ್ಯರುಗಳು,  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ  ಜನಾರ್ಧನ ಗೌಡ, ಕೃಷ್ಣ ಅಮೀನ್, ರಾಮ ಭಜನಾ ಮಂದಿರದ  ಅಧ್ಯಕ್ಷ ಮುರಳೀಧರ್ ಶೆಟ್ಟಿ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ. ಶಕ್ತಿ ಕೇಂದ್ರದ ಪ್ರಮುಖ್ ರಾಮಚಂದ್ರ ಪಟ್ಲಚ್ಚಿಲ್, ಉದ್ಯಮಿ ಮಾಧವ ಶೆಣೈ, ಶ್ರೀಮತಿ ಶರತ್ ಜಿ. ಜಯಶೀಲಾ ನಾಯ್ಕ್, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯಂತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಕುಶಾಲ್ ಕುಮಾರ್ ಸ್ವಾಗತಿಸಿ ನಿರೂಪಿಸಿದರು.20210929_163345

By suddi9

Leave a Reply

Your email address will not be published. Required fields are marked *