ಕೈಕಂಬ :ತೆಂಕ ಎಡಪದವು ಗ್ರಾಮದ ಬ್ರಿಂಡೇವಿ ಪದವಿನ ನೆಲ್ಲಿಜೋರ ಎಂಬಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ತ್ಯಾಜ್ಯ ಘಟಕವನ್ನು ನಿರ್ಮಿಸಲು ಗ್ರಾಮಸ್ಥರಿಗೂ ಮಾಹಿತಿ ತಿಳಿಸದೆ ಕೆಲಸ ಶುರು ಮಾಡಲಾಗಿದೆ ಈ ಬಗ್ಗೆ ಸೆ.೨೬ರಂದು ಬ್ರಿಂಡೇವಿ ಕೊರ್ಡೆಲ್ ಪದರಂಗಿ ಒಡ್ಡೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲ ಸಭೆ ಸೇರಿ ಪ್ರತಿಭಟನೆ ನಡೆಸಲಾಯಿತು.
ಗ್ರಾಮಸ್ಥರೆಲ್ಲರೂ ಒಕ್ಕೊರಲಿನಿಂದ ಯಾವುದೇ ಕಾರಣಕ್ಕೂ ಈ ಘಟಕವನ್ನು ನಿರ್ಮಿಸಲು ಬಿಡುವುದಿಲ್ಲ ಎಂಬ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಈ ತೀರ್ಮಾನವನ್ನು ನಮ್ಮ ಊರಿನ ಶಾಸಕರಿಗೂ ಹಾಗೂ ಸಂಬಂದಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕೊಡುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ರೈತ ಮುಖಂಡ ಮನೋಹರ ಶೆಟ್ಟಿ, ಮಾಜಿ ತಾಲೂಕು ಪಂ.ಸದಸ್ಯ ನಾಗೇಶ್ ಶೆಟ್ಟಿ ,ದಿನೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

