ಕರಿಯಂಗಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ವತಿಯಿಂದ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕು ಬೂತ್ ಮಟ್ಟದ ಸಭೆಯು ಸೆ. 22ರಂದು ಬುಧವಾರ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ -ಕಲ್ಪವೃಕ್ಷ ಎಂಬ ಧ್ಯೇಯದೊಂದಿಗೆ ಕರಿಯಂಗಳ ಬೂತ್ ಅಧ್ಯಕ್ಷ ಲೋಕೇಶ್ ಪೂಜಾರಿ ಅವರ ಮನೆಯಿಂದ ನಮ್ಮನಡೆ ..ಬೂತ್ ಕಡೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉಪಾಧ್ಯಕ್ಷೆ ವೀಣಾ ಆಚಾರ್ಯ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್, ದ. ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಮೇಶ್ ಆಚಾರ್ಯ, ವಲಯ ಕಾರ್ಯದರ್ಶಿ ಬಷೀರ್ ಗಾಣೇಮಾರ್, ಮಧುಸೂದನ್ ಶಣೈ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವ್ ಕೋಟ್ಯಾನ್, ಲಕ್ಷ್ಮೀಶ್ ಶೆಟ್ಟಿ, ರಾಧ ಲೋಕೇಶ್, ಗೀತಾ, ಲತೀಫ್ ಕಲ್ಕುಡ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರಿಯಂಗಳದ ನಾಲ್ಕು ಬೂತ್ ಅಧ್ಯಕ್ಷರುಗಳಿಗೆ ಕಾಂಗ್ರೇಸ್ ಪಕ್ಷ -ಕಲ್ಪವೃಕ್ಷ ವನ್ನು ನೀಡಲಾಯಿತು.ಪೊಳಲಿ ಬೂತ್ ಅಧ್ಯಕ್ಷ ಪ್ರೇಮ್ ನಾಥ್ ಚೇರಾ, ಕಲ್ಕುಟ ಬೂತ್ ಅಧ್ಯಕ್ಷ ವಿಮಲಕೋಡಿ ಪ್ರಶಾಂತ್ ಕರಿಯಂಗಳ ಬೂತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಬಡಕಬೈಲ್ ಬೂತ್ ಅಧ್ಯಕ್ಷ ಝರಿ ಬಸೀರ್ .


