ಕೈಕಂಬ: ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2021-22ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ಸೆ.20 ರಂದು ಸೋಮವಾರ ವಿಜ್ರಂಭಣೆಯಿಂದ ನಡೆಯಿತು.
ಬೆಳಗ್ಗೆ ೭.೩೦ಕ್ಕೆ ಶಾಲಾ ಸಂಚಾಲಕರಾದ ಅಮ್ಮುಂಜೆಗುತ್ತು ಡಾ. ಎ. ಮಂಜಯ್ಯ ಶೆಟ್ಟಿಯವರ ಉಪಸ್ಥಿತಿಯಲ್ಲಿ ಶ್ರೀ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ಶಶಿಧರ್ ಭಟ್ ಗಣಹೋಮ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಭಂಡಾರಿ ವಹಿಸಿದ್ದರು. ಪಂಚಾಯತ್ ಸದಸ್ಯರಾದ ಕಾರ್ತಿಕ್ ಬಲ್ಲಾಲ್, ಟಿ. ಎಚ್ ಅಬ್ದುಲ್ ರಜಾಕ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಪ್ರಣಾಮ್ ಶೆಟ್ಟಿ , ಹಳೆ ವಿದ್ಯಾರ್ಥಿ ಸಂಘದ ಸಲಹೆಗಾರ ಎಂ.ಟಿ. ಅಬ್ದುಲ್ ಹಕೀಂ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುನಿತಾ ಭಟ್ ಉಪಸ್ಥಿತರಿದ್ದರು. 
ಶಾಲಾ ಮುಖ್ಯ ಶಿಕ್ಷಕಿ ಲೀನಾ ಸ್ವಾಗತಿಸಿದರು, ಬಿ.ಎ.ಹರೀಶ್ ರಾವ್ ನಿರೂಪಿಸಿದರು. ಶಿಕ್ಷಕ ಬಾಲಕ್ರಷ್ಣ ವಂದಿಸಿದರು.



