ಮೂಡುಬಿದಿರೆ: ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಮುಕ್ತಾಯಗೊಳಿಸಿ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಹೊಸ ಕಾನೂನನ್ನು ಜಾರಿಗೆ ತರಬೇಕು ಎಂದು ಎಸ್‌ಡಿಪಿಐ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಹೇಳಿದರು.WhatsApp Image 2021-09-17 at 10.21.31 AMದಿಲ್ಲಿಯ ಸಿವಿಲ್ ಡಿಫೆನ್ಸ್ನ ಮಹಿಳಾ ಪೊಲೀಸ್ ಅಧಿಕಾರಿಯನ್ನು ಅತ್ಯಾಚಾರ ಎಸಗಿ ನಂತರ ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಖಂಡಿಸಿ ಮೂಡುಬಿದಿರೆ ಎಸ್‌ಡಿಪಿಐ ವತಿಯಿಂದ ಇಲ್ಲಿನ ಮುಖ್ಯರಸ್ತೆ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಕಾನೂನು ರಕ್ಷಕರಿಗೆ ಇಂತಹ ಸ್ಥಿತಿ ಬಂದಿರುವುದು ದೇಶದ ದುರಂತ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಇದರ ಹಿಂದಿರುವ ದುಷ್ಟಶಕ್ತಿಗಳನ್ನು ಬಯಲಿಗೆಳೆಯಬೇಕು ಎಂದರು.

ಹೋರಾಟಗಾರ ಅಚ್ಯುತ ಸಂಪಿಗೆ ಮಾತನಾಡಿ ದೇಶದ ವಿವಿದೆಡೆ ಈ ಹಿಂದೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಸರಕಾರ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದರಿಂದ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿವೆ. ಸರಕಾರ ಒಂದೆಡೆ ರಾಮರಾಜ್ಯದ ಕನಸು ಕಾಣುತ್ತಿದ್ದರೆ ಇನ್ನೊಂದೆಡೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲ್ಲಿದ್ದು ಮಹಿಳೆಯರು ಅಭದ್ರತೆಯಲ್ಲಿದ್ದಾರೆ ಎಂದು ಆರೋಪಿಸಿದರು

By suddi9

Leave a Reply

Your email address will not be published. Required fields are marked *