ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರರಾಗಿ ಹಲವು ವರ್ಷಗಳಿಂದ ದೈವಗಳ ಸೇವೆ ಮಾಡಿದ ಲಿಂಗಪ್ಪ ಗುರಿಕಾರ(66) ಶ್ರೀಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರದಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡು ನಮ್ಮೊಂದಿಗೆ ಒಡನಾಟದಲ್ಲಿದ್ದ ಅವರು ಸೆ.11 ರಂದು ಶನಿವಾರ ನಗರದ ಆಸ್ಪತ್ರೆಯಲ್ಲಿ ವಿಧಿವಶರಾದರು.
ಅವರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅವರ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಅವರ ಕುಟುಂಬಸ್ಥರಿಗೆ ಅಗಲುವಿಕೆಯ ದುಃಖ ವನ್ನು ಭರಿಸುವ ಶಕ್ತಿ ದೈವ ದೇವರುಗಳು ದಯಪಾಲಿಸಲಿ.
