ಕಿನ್ನಿಗೋಳಿ: ಕೆಮ್ರಾಲ್ ಗ್ರಾಮದ ಅತ್ತೂರು ಮೂಡ್ರಗುತ್ತು ನಿವಾಸಿ, ಉದ್ಯಮಿ ರಘುನಾಥ ಬಿ.ಶೆಟ್ಟಿ (67) ಅವರು ಅಲ್ಪಕಾಲದ ಅಸೌಖ್ಯದಿಂದ ಕಿನ್ನಿಗೋಳಿ ಖಾಸಗಿ ಆಸ್ಪತ್ರೆಯಲ್ಲಿ ಸೆ.11 ರಂದು ಶನಿವಾರ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಯನ್ನು ಅಗಲಿದ್ದಾರೆ. ಅವರು ವಿವಿಧ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಈ ಹಿಂದೆ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಯಾಗಿದಗದು, ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ದೈವಸ್ಥಾನದ ಟ್ರಷ್ಟಿ ಯಾಗಿದ್ದರು. ಅತ್ತೂರು ಮಾಗಣೆಯ ಕೆಮ್ರಾಲ್ ಶ್ರೀ ಕೋರ್ದಬ್ಬು ದೈವಸ್ಥಾನ ಸಮಿತಿ ಅಧ್ಯಕ್ಷ ರಾಗಿದ್ದರು. ಅತ್ತೂರು ಕೊಡೆತ್ತೂರು ನಾಗರಿಕ ವೇದಿಕೆ ಉಪಾಧ್ಯಕ್ಷ ರಾಗಿ, ಕಿನ್ನಿಗೋಳಿ ರೋಟರಿ ಕ್ಲಬ್ ಸದಸ್ಯರಾಗಿದ್ದರು.
