ಮೂಡುಬಿದರೆ: `ಭತ್ತ ಬೆಳೆಯ ಕ್ಷೇತ್ರೋತ್ಸವ’ ಮಾಹಿತಿ ಕಾರ್ಯಕ್ರಮ ಪ್ರಗತಿಪರ ಕೃಷಿಕ ಮಿಜಾರು ಹೊಸಮನೆ ಜೀವಂಧರ್ ಕುಮಾರ್ ಅವರ ಮನೆ ಆವರಣದಲ್ಲಿ ನಡೆಯಿತು.
ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಜೇಮ್ಸ್ ವಿಲಿಯಂ ಮಾಹಿತಿ ನೀಡುತ್ತಾ, ಹೈಬ್ರಿಡ್ ಭತ್ತದ ತಳಿಯಿಂದ ಕಡಿಮೆ ಅವಧಿ ಮತ್ತು ಕಡಿಮೆ ಖಚರ್ಿನಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯ. ಆಯಾಯ ಪ್ರದೇಶಗಳ ಅನುಕೂಲಕ್ಕೆ ಮತ್ತು ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಕಂಪೆನಿ ವಿವಿಧ ಹಬ್ರಿಡ್ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಕರಾವಳಿ ಜಿಲ್ಲೆಗೆ ಹೊಂದಿಕೆಯಾಗುವ ಸಾಮ್ರಾಟ್ ತಳಿಯನ್ನು ಮಿಜಾರಿನ ಜೀವಂಧರ್ ಕುಮಾರ್ ಅವರ ಗದ್ದೆಯಲ್ಲಿ ಬೆಳೆಸಿ ಉತ್ತಮ ಫಸಲು ತೆಗೆಯಲಾಗಿದೆ. ಗದ್ದೆಯಲ್ಲಿ 6 ಕೆಜಿ ಭತ್ತದ ಬೀಜದಲ್ಲಿ 25 ಕ್ವಿಂಟಲ್ ಭತ್ತದ ಫಸಲು ತೆಗೆಯಲಾಗಿದೆ =ಎಂದರು.


ಇಂದಿನ ತಾಂತ್ರಿಕ ಯುಗದಲ್ಲಿ ರೈತರು ಬದಲಾವಣೆಗೆ ಹೊಂದಿಕೊಂಡು ಹೊಸ ಮಾದರಿಯ ಕೃಷಿಗೆ ತಮ್ಮನ್ನು ತೊಡಗಿಸಿಕೊಂಡು ಅಧಿಕ ಇಳುವರಿ ಪಡೆಯುವತ್ತ ಗಮನಹರಿಸಬೇಕು ಎಂದರು.
ಪ್ರಗತಿಪರ ಕೃಷಿಕರಾದ ಎಂ.ಜೀವಂಧರ್ ಕುಮಾರ್, ರಾಜವರ್ಮ ಬೈಲಂಗಡಿ ಹಾಗೂ ಡಾ.ವಿ.ಬಿ ವಿಮಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಇಂಡೋ ಅಮೇರಿಕನ್ ಹೈಬ್ರೀಡ್ ಸೀಡ್ಸ್ ಕಂಪೆನಿಯ ಎಂ.ಪ್ರಭಾಕರ ರೆಡ್ಡಿ, ಎನ್. ಸಿದ್ಧಲಿಂಗಪ್ಪ, ಡಾ.ಸಿ. ದೇವರಾಜ್, ಎಡಪದವು ಗ್ರಾಪಂ ಅಧ್ಯಕ್ಷ ರಾಮಣ್ಣ ಶೆಟ್ಟಿ, ಮಾಸ್ ಅಧ್ಯಕ್ಷ ರಾಜರಾಮ್ ಭಟ್ ಕೈರಂಗಳ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕೃಷಿ ತಜ್ಞ ಡಾ. ಎಲ್.ಸಿ ಸೋನ್ಸ್ ಭತ್ತದ ಇತರ ತಳಿಗಳು ಮತ್ತು ಹೈಬ್ರಿಡ್ ತಳಿಗಳ ವ್ಯತ್ಯಾಸ ಮತ್ತು ಮಾಹಿತಿ ರೈತರಿಗೆ ಸರಿಯಾದ ತಿಳುವಳಿಕೆ ಮೂಡಿಸುವುದು ಅಗತ್ಯ ಇದೆ ಎಂದರು. ಕೃಷಿ ವಿಚಾರ ವಿನಿಯಮ ಕೇಂದ್ರದ ಅಧ್ಯಕ್ಷ ಸದಾಶಿವ ಶೆಟ್ಟಿ ಸ್ವಾಗತಿಸಿದರು. ಅನಂತ್ರಾಮ್ ನಿರೂಪಿಸಿದರು. ಪ್ರಭಾಕರ ರೆಡ್ಡಿ ವಂದಿಸಿದರು.
