Published On: Mon, Sep 6th, 2021

ಮಹಾರಾಷ್ಟ್ರ ಪ್ರದೇಶ ಬಿಜೆಪಿ ನೂತನ ಉಪಾಧ್ಯಕ್ಷ ಕೃಪಾಶಂಕರ್ ಸಿಂಗ್ ಅವರಿಗೆ ಪೊವಾನಲ್ಲಿ ಅಭಿಮಾನಿ ಬಳಗದ ಶುಭಕಾಮನಾ ಸನ್ಮಾನ

ಮುಂಬಯಿ : ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಯಿಯಲ್ಲಿ ಉತ್ತರ ಭಾರತದ ಧುರೀಣ ಎಂದೇ ಕರೆಯಲ್ಪಡುವ ಮಹಾರಾಷ್ಟ್ರ ರಾಜ್ಯದ ಮಾಜಿ ಗೃಹ ಸಚಿವರಾಗಿದ್ದು ಇತ್ತೀಚೆಗೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಮಹಾರಾಷ್ಟ್ರ ರಾಜ್ಯ ಪ್ರದೇಶ ಬಿಜೆಪಿ ಉಪಾಧ್ಯಕ್ಷ ಆಗಿ ನೇಮಕಗೊಂಡ ಕೃಪಾಶಂಕರ್ ಸಿಂಗ್ ಅವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.Kripashankar Singh @ Powai Honour 1ಶನಿವಾರ ರಾತ್ರಿ ಉಪನಗರ ಪೊವಾಯಿ ಇಲ್ಲಿನ ಹಿರಾನಂದನಿ ಗಾರ್ಡನ್ಸ್ ಆರ್ಚರ್ಡ್ ಅವೆನ್ಯೂ ಇಲ್ಲಿನ ಒಡೆಸ್ಸೀ ಸಭಾಗೃಹದಲ್ಲಿ ಮುಂಬಯಿನ ಪ್ರತಿಷ್ಠಿತ ಕೈಗಾರಿಕೋದ್ಯಮಿ, ಆರ್ಗಾ್ಯನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ (ಸಿಎಂಡಿ) ತೋನ್ಸೆ ಆನಂದ ಎಂ.ಶೆಟ್ಟಿ ಸಾರಥ್ಯದಲ್ಲಿ ಕೃಪಾಸಿಂಗ್ ಹಿತೈಷಿಗಳು ಮತ್ತು ಅಭಿಮಾನಿ ಬಳಗ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಕೃಪಾಶಂಕರ್ ಸಿಂಗ್ ಅವರಿಗೆ ಶಾಲು ಹೊದೆಸಿ ಮೈಸೂರು ಪೇಟ ಧರಿಸಿ ಫಲಪುಷ್ಪ ಸ್ಮರಣಿಕೆಯನ್ನಿತ್ತು ಸನ್ಮಾನಿಸಿ ಅಭಿನಂದಿಸಿದರು.Kripashankar Singh @ Powai Honour 2ಈ ಸಂದರ್ಭದಲ್ಲಿ ಆರ್ಗಾ್ಯನಿಕ್ ಇಂಡಸ್ಟ್ರೀಸ್ ನ ನಿರ್ದೇಶಕರಾದ ಶಶಿರೇಖಾ ಆನಂದ್ ಶೆಟ್ಟಿ, ಪ್ರವೀರ್ ಎ.ಶೆಟ್ಟಿ, ಆದೀಶ್ ಎ.ಶೆಟ್ಟಿ, ಉದ್ಯಮಿಗಳಾದ ವಿನಯ್ ಕುಮಾರ್ ಸಿಂಗ್ (ರಾಜು ಬಿಹಾರ್), ಎಂ.ಪಿ ಸಿಂಗ್, ರಾಜ್ ಸಿಂಗ್, ಸತ್ಯಕುಮಾರ್ ಸಿಂಗ್, ಆನಿಲ್‌ಕುಮಾರ್ ಸಿಂಗ್, ದೀಪಕ್ ಸಿಂಗ್, ವಿಕ್ಕಿ ಸಿಂಗ್, ನ್ಯಾ| ಕೆ.ಎಚ್ ಗಿರಿ ಮುಲುಂಡ್, ಡಾ| ರಾಜೇಂದ್ರ ಸಿಂಗ್, ವಿಜಯ್ ಸಿಂಗ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.Kripashankar Singh @ Powai Honour 3

ರಾಷ್ಟçಪ್ರೇಮಿ, ರಾಷ್ಟçಭಕ್ತ ಸಮಾಜ ಸೇವಕ, ಕೊಡುಗೈದಾನಿ ಆಗಿದ್ದು ಕಳೆದ ಬಾರಿ ಆಪ್ಟಿಮಲ್ ಮೀಡಿಯಾ ಸೊಲ್ಯೂಶನ್‌ಸ್ ಸಂಸ್ಥೆ ಟೈಂಮ್ಸ್ ಪವರ್ ಮೆನ್ ಪ್ರಸ್ತುತ ಪಡಿಸಿದ ವಾರ್ಷಿಕ ಪುರಸ್ಕಾರ ‘ಬಿಝಿನೆಸ್ ಮ್ಯಾಗ್ನೇಟ್’ (ಶ್ರೀಮಂತ ಉದ್ಯೋಗಸ್ಥ) ಪ್ರಶಸ್ತಿ ಮುಡಿಗೇರಿಸಿದ ತೋನ್ಸೆ ಆನಂದ ಎಂ.ಶೆಟ್ಟಿ ಅವರ ಅನುಪಮ ಸಾಧನೆಯನ್ನೂ ಪ್ರಶಂಸಿಸಿ ಕೃಪಾಶಂಕರ್ ಸಿಂಗ್ ಅಭಿನಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter