ಬಂಟ್ವಾಳ: ಇಲ್ಲಿನ ಪಿಲಾತಬೆಟ್ಟು ಗ್ರಾಮದ ಅತ್ತಾಜೆ ನಿವಾಸಿ, ಬೀಡಿ ಗುತ್ತಿಗೆದಾರ ಲಕ್ಷ್ಮಣ ಶೆಟ್ಟಿಗಾರ್(೬೫) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.02 ರಂದು ಗುರುವಾರ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಇದ್ದಾರೆ. ಗಣೇಶ ಬೀಡಿ ಗುತ್ತಿದಾರರಾಗಿದ್ದ ಅವರು ಹವ್ಯಾಸಿ ನಾಟಕ ಕಲಾವಿದರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷರಾಗಿದ್ದರು.
