ಮೂಡುಬಿದಿರೆ: ಕಂಬಳ ಅಕಾಡೆಮಿಯ ವತಿಯಿಂದ ನಡೆಯುವ 20-21ನೇ ಸಾಲಿನ ಓಟಗಾರರ ತರಬೇತಿ ಶಿಬಿರವು ಸೆ.19ರಂದು ಭಾನುವಾರ ಆರಂಭಗೊಳ್ಳಲಿದ್ದು ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಸೆ.7ರಂದು   ನಡೆಯಲಿದೆ ಎಂದು ಅಕಾಡೆಮಿಯ ನಿರ್ದೇಶಕರ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.buffalo_202101306ನೇ ವರ್ಷದ ವಾರ್ಷಿಕ ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಮೂಡುಬಿದಿರೆಯ ವೀರರಾಣೆ ಅಬ್ಬಕ್ಕ ಸಂಸ್ಕೃತಿ ಗ್ರಾಮ ಕೋಟಿ-ಚೆನ್ನಯ ಕಂಬಳ ಕ್ರೀಡಾಂಗಣ ಪರಿಸರದಲ್ಲಿ ಬೆಳಿಗ್ಗೆ 9.00 ಗಂಟೆಗೆ ನಡೆಯಲಿದೆ.

ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳು: ಕೃಷಿ ಹಿನ್ನಲೆ ಹೊಂದಿದವನಾಗಿದ್ದು ಹೊಲ ಉಳುಮೆಯ ಅನುಭವ ಪಡೆದಿರಬೇಕು, 18 ವರ್ಷದಿಂದ 25 ವರ್ಷದ ವಯಸ್ಸಿನ ಒಳಗಿನವರಾಗಿರಬೇಕು. ಕೋವಿಡ್-19 ರ ಸರಕಾರದ ನಿಯಮಾವಳಿ ಕನಿಷ್ಠ ಒಂದು ಲಸಿಕೆಯನ್ನು ಪಡೆದಿರಬೇಕು, ಆಧಾರ್ ಕಾರ್ಡ್ ನಕಲು ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ ತರಬೇಕು, ಅಭ್ಯರ್ಥಿಯು ಟಿ-ಶರ್ಟ್ ಮತ್ತು ಶಾರ್ಟ್ಸ್ ಹೊಂದಿರುವುದು ಕಡ್ಡಾಯ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆ.ಗುಣಪಾಲ ಕಡಂಬ (8197331272) , ಅಥವಾ ಸುರೇಶ್ ಕೆ ಪೂಜಾರಿ ( 9060734499) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *