ಮುಂಬಯಿ : ಭರತನಾಟ್ಯ ಯಕ್ಷ ನಾಟ್ಯದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದು ಅತೀ ಚಿಕ್ಕ ವಯಸ್ಸಿನಲ್ಲೇ ನಾಟ್ಯ ಪ್ರವೀಣೆಯಾಗಿ ನಾಟ್ಯರಂಗಲಿ ಮೆರೆಯುತ್ತಿರುವ ನೃತ್ಯ ನಿರ್ದೇಶಕಿ ಕು| ಅಂಕಿತಾ ನಾಗರಾಜ್ ನಾಯ್ಕ್ ತನ್ನ ಸಾರಥ್ಯದಲ್ಲಿ ‘ಸಂಪೂರ್ಣ ಯೋಗಂ ಇದಂ ನಾಟ್ಯಂ’ ಎಂಬ ತತ್ವದ ‘ನೃತ್ಯಾಂಕಿತ’ ಭರತ ನಾಟ್ಯ ಶಾಲೆಯನ್ನು ಕಳೆದ ಭಾನುವಾರ ಮೀರಾರೋಡ್ ಪೂರ್ವದ ನಿವ್ ಪ್ಲೆಸಂಟ್ ಪಾರ್ಕ್ನ ಶ್ರೀ ಶನೀಶ್ವರ ಚಾರಿಟೇಬಲ್ ಸೇವಾ ಟ್ರಸ್ಟ್ ಸಭಾಗೃಹದಲ್ಲಿ ಆರಂಭಿಸಿದರು.
ಶ್ರೀ ಶನೀಶ್ವರ ಚಾರಿಟೇಬಲ್ ಸೇವಾ ಟ್ರಸ್ಟ್ ನ ಆಶ್ರಯಲ್ಲಿ ಪ್ರಾರಂಭಗೊಳಿಸಲಾದ ನೃತ್ಯಶಾಲೆಯನ್ನು ಕು| ಅಂಕಿತಾ ಅವರ ಪ್ರೇರಕ ಶಕ್ತಿ ಮಾತೃಶ್ರೀ ಸರೋಜ ನಾಗರಾಜ್ ನಾಯ್ಕ ಅವರನ್ನೊಳಗೊಂಡು ಶ್ರೀ ಶನೀಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷೆ ವಿದ್ಯಾ ಅಶೋಕ್ ಕರ್ಕೇರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಾರೈಸಿದರು.
ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ವಿನೋದ್ ವಾಗಸ್ಯಾ, ಮಂದಿರದ ಸೇವಾ ಸದಸ್ಯರುಗಳಾದ ಗುಣಕಾಂತ್ ಶೆಟ್ಟಿ ಕರ್ಜೆ, ಹಿಮಾಂಶು ಅಮೀನ್, ಜಯೇಶ್ ಸುವರ್ಣ ಹಾಗೂ ಶಿಬಿರಾರ್ಥಿಗಳ ಪಾಲಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದು ಶನೀಶ್ವರ ಟ್ರಸ್ಟ್ನ ಸದಸ್ಯರು ದೇವತಾ ಪ್ರಾರ್ಥನೆ ನೆರವೇರಿಸಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳ ಹೆಸರು ಪಡೆದಿರುವ ಅದರಲ್ಲೂ ನಾಟ್ಯ ಕ್ಷೇತ್ರದಲ್ಲಿ ಪರಿಣತಿ ಪಡೆದು ಸಾಧಕರಾಗಿ ಹೆಸರು ಪಡೆದಿರುವ ಅನೇಕ ಕಲಾವಿದರ ನೆಲೆ ಮೀರಾರೋಡ್. ಅಸಂಖ್ಯ ಕನ್ನಡ ತುಳುವರು ಭೇದಭಾವ ಮರೆತು ಸಂಘಟಿತರಾಗಿ ಅದೆಷ್ಟೋ ಸಂಘಸAಸ್ಥೆಗಳನು ಕಟ್ಟಿ ಬೆಳೆಸಿ ಸಾರ್ಥಕತೆ ಪಡೆದಿರುವರು. ಇದೇ ರೀತಿ ಪರಿಸರದ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸತಾಗಿ ಇನ್ನೊಂದು ಹೆಸರು ಸೇರ್ಪಡೆಗೊಂಡಿದ್ದು ಅದುವೇ ನೃತ್ಯಾಂಕಿತ ಭರತನಾಟ್ಯ ಶಾಲೆ ಎಂದು ಕಲಾಸೌರಭ ಮುಂಬಯಿ ಇದರ ನಿರ್ದೇಶಕ ಪದ್ಮನಾಭ ಸಸಿಹಿತ್ಲು ತಿಳಿಸಿದರು.
ಕಿರಿ ವಯಸ್ಸಿನಲ್ಲೇ ಅದೆಷ್ಟೋ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗೌರವ ಸಮ್ಮಾನಗಳ ಪಡೆದು ಬಹುಭಾಷಾ ನೃತ್ಯ ನಿರ್ದೇಶಕಿಯಾಗಿ ಗುರುತಿಸಿ ಕೊಂಡಿರುವ ಕು. ಅಂಕಿತಾ ಅತೀ ಚಿಕ್ಕ ವಯಸ್ಸಿನಲ್ಲೇ ಮುಂಬಯಿಯ ಪ್ರಸಿದ್ಧ ಭರತನಾಟ್ಯ ಶಿಕ್ಷಕಿ ಗುರು ಶ್ರೀಮತಿ ಚಾಯಾ ಖನ್ವಟೇ ಅವರಿಂದ ನಾಟ್ಯ ಕಲಿಕೆಯನು ಇಂದಿಗೂ ನಿರಂತರವಾಗಿಸಿ ಅವರದ್ದೇ ಮಾರ್ಗದರ್ಶನಲ್ಲಿ ತನ್ನ ೧೪ನೇ ವಯಸ್ಸಿನಲ್ಲೇ ಭರತನಾಟ್ಯ ಅರಂಗ್ರೇಟಂ ಪರಿಣತಿಯನ್ನು ಪಡೆದಿರುವ ಅನುಭವಿ ನಾಟ್ಯ ಕಲಾವಿದೆ ಎಂದೂ ಪದ್ಮನಾಭ ಸಸಿಹಿತ್ಲು ತಿಳಿಸಿದರು.
ಅಭಿಮಾನಿಗಳ ಬಹು ಬೇಡಿಕೆ ಹಾಗೂ ಮುಂಬಯಿಯ ಖ್ಯಾತ ಸಂಗೀತ ಸಾಂಸ್ಕೃತಿಕ ಸಂಸ್ಥೆ ಕಲಾಸೌರಭ ಇದರ ರೂವಾರಿ ಪದ್ಮನಾಭ ಸಸಿಹಿತ್ಲು ಅವರ ಸಲಹೆ ಸೂಚನೆಯಂತೆ ಈ ಭರತ ನಾಟ್ಯ ಶಾಲೆ ಆರಂಭಿಸಿದ್ದು ಕಲಿಯಲು ಸೇರಲಿಚ್ಚಿಸುವವರು ಹಾಗೂ ಇತರ ಮಾಹಿತಿಗಾಗಿ ೯೧೩೭೫೮೬೩೨೯ “ನೃತ್ಯಾಂಕಿತ” ಸಂಸ್ಥೆ, ೯೮೬೭೯೮೧೦೯೯ ಕಲಾಸೌರಭ ಮುಂಬಯಿ ಇವರನ್ನು ಸಂಪರ್ಕಿಸಲು ಸಂಘಟಕರು ತಿಳಿಸಿರುವರು.
