ಮೂಡುಬಿದಿರೆ: ಪುತ್ತಿಗೆ ಗ್ರಾಮದಲ್ಲಿ ಮನೆಯ ಕೂಲಿ ಕೆಲಸಕ್ಕೆ ಬಂದಾತ, ಮಹಿಳೆಯೊಬ್ಬಳ ಸ್ನೇಹ ಬೆಳೆಸಿ, ಆಕೆಯ ನಗ್ನಚಿತ್ರಗಳನ್ನು ಮುಂದಿಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದು, ಯುವಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಪುತ್ತಿಗೆ ಗ್ರಾಮದ ನಿವಾಸಿ ವಿಜಯ್ ಗೌಡ ಬಂಧಿತ. ಮಹಿಳೆಯ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಿದ್ದ ವಿಜಯ್ ಗೌಡ ಆನಂತರ ಮೊಬೈಲ್ ನಂಬರ್ ಪಡೆದು ಸಲುಗೆ ಬೆಳೆಸಿದ್ದಾನೆ. ಆನಂತರ ಕರೆ ಮಾಡಿ, ತನಗೆ ವಾಟ್ಸಪ್ ನಲ್ಲಿ ನಗ್ನಚಿತ್ರಗಳನ್ನು ಕಳುಹಿಸುವಂತೆ ಆರೋಪಿಯು ಒತ್ತಡ ಹೇರಿದ್ದು, ಇಲ್ಲದಿದ್ದರೆ ತನಗೆ ನಿನ್ನ ಜೊತೆ ಸಂಬಂಧ ಇದೆಯೆಂದು ಸುದ್ದಿ ಹಬ್ಬಿಸುವುದಾಗಿ ಬೆದರಿಸಿದ್ದಾನೆ.WhatsApp Image 2021-08-31 at 8.46.24 AMಒತ್ತಡಕ್ಕೆ ಬಿದ್ದ ಮಹಿಳೆ, ಆ ಬಳಿಕ ಯುವಕನಿಗೆ ನಗ್ನಚಿತ್ರಗಳನ್ನು ಕಳುಹಿಸಿದ್ದು ಅದೇ ಫೋಟೋಗಳನ್ನು ಮುಂದಿಟ್ಟು ಯುವಕ ಬ್ಲಾಕ್ ಮೇಲ್ ಮಾಡಿದ್ದಾನೆ. ಆನಂತರ ತನ್ನೊಂದಿಗೆ ಲೈಂಗಿಕ ಕ್ರಿಯೆ, ಹಣ ನೀಡುವಂತೆ ಒತ್ತಾಯಿಸಿದ್ದು, ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುತ್ತೇನೆ, ಮನೆಯವರಿಗೂ ಫೋಟೋ ಕಳುಹಿಸುತ್ತೇನೆ ಎಂದು ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಗಸ್ಟ್ 19ರಂದು ಎರಡು ಸಾವಿರ ರೂಪಾಯಿ ಪೀಕಿಸಿಕೊಂಡಿದ್ದಾನೆ. ಆನಂತರ ಆಗಸ್ಟ್ 28ರಂದು ಮಹಿಳೆಯ ಮನೆಗೆ ತೆರಳಿ, ಹಣ ನೀಡುವಂತೆ ಪೀಡಿಸಿದ್ದು, ಹಣ ನೀಡದೇ ಇದ್ದಾಗ ನಗ್ನಚಿತ್ರಗಳನ್ನು ತನ್ನ ಗೆಳೆಯರಿಗೆ ಕಳುಹಿಸಿ ಮಾನ ಹರಾಜು ಮಾಡಿದ್ದಾನೆ ಎಂದು ಮಹಿಳೆ ಪೊಲೀಸ್ ದೂರು ನೀಡಿದ್ದಾಳೆ. ಪೊಲೀಸರು ಆರೋಪಿ ವಿಜಯ್ ಗೌಡನನ್ನು ಬಂಧಿಸಿದ್ದಾರೆ

By Suddi9

Leave a Reply

Your email address will not be published. Required fields are marked *