ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನ.14,15,16ರಂದು ನಡೆಯಲಿರುವ ಆಳ್ವಾಸ್ ನುಡಿಸಿರಿ 2014 ಕನ್ನಡ ನಾಡು ನುಡಿ ಸಮ್ಮೇಳನದಲ್ಲಿ ಒಂದು ದಿನ ತುಳು ಭಾಷೆ ಸಂಸ್ಕೃತಿ, ವೈವಿಧ್ಯತೆಗಳನ್ನು ಸಾದರಪಡಿಸುವ ತುಳುಸಿರಿ ಕುರಿತ ಪೂರ್ವಭಾವಿ ಸಭೆ ಸೋಮವಾರ ಸಂಜೆ ವಿದ್ಯಾಗಿರಿಯಲ್ಲಿ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿ, ಕಳೆದ 10 ವರ್ಷಗಳಿಂದ ಕನ್ನಡ ನಾಡು ನುಡಿಗೆ ಆಳ್ವಾಸ್ ನುಡಿಸಿರಿಯ ಅಪೂರ್ವ ಕಾಣಿಕೆ ಸಲ್ಲಿಸುತ್ತಾ ಬಂದಿದೆ. ಆಳ್ವಾಸ್ ನುಡಿಸಿರಿ 2014ರಲ್ಲಿ ಪ್ರಾದೇಶಿಕ ಭಾಷೆಯಾದ ಕೊಂಕಣಿ, ತುಳು, ಬ್ಯಾರಿ ಭಾಷೆಗಳಿಗೂ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನುಡಿಸಿರಿಯ ಮೊದಲ ದಿನ ತುಳು ಭಾಷೆಗೋಸ್ಕರ ತುಳುಸಿರಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಕಾರ್ಯಕ್ರಮದಲ್ಲಿ ತುಳುನಾಡಿನ ಸೊಬಗು, ತುಳು ಭಾಷೆಯ ಸೊಗಡು, ಇಲ್ಲಿನ ಸಾಂಸ್ಕೃತಿಕ ವಿಶೇಷತೆಗಳನ್ನು ಅವಿಭಜಿತ ದ.ಕ ಜಿಲ್ಲೆ ಹಾಗೂ ಹೊರನಾಡಿನ ಜನತೆಗೆ ಸೂಕ್ತ ರೀತಿಯಲ್ಲಿ ಅನಾವರಣಗೊಳಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.
ತುಳು ಸಂಸ್ಕೃತಿ, ಸಮುದಾಯಗಳ ವೈವಿಧ್ಯತೆಗಳಿಗೆ ಆಧ್ಯತೆ
28 mh

ಸಭಾಂಗಣದ ಒಂದು ಕಡೆ ತುಳು ಪರಂಪರೆ, ಜನಜೀವನವನ್ನು ಬಿಂಬಿಸುವ ಪ್ರದರ್ಶನ, ಪ್ರಾತ್ಯಕ್ಷಿಕೆಗಳಿದ್ದರೆ. ಇನ್ನೊಂದೆಡೆ ತುಳುನಾಡಿನ ವಿವಿಧ ಸಮುದಾಯಗಳು ತಮ್ಮ ಪರಂಪರೆ, ವಿಶೇಷತೆಗಳನ್ನು ತೋರ್ಪಡಿಸುವಲ್ಲಿ ಅವಕಾಶ ಕಲ್ಪಿಸುವ ಯೋಚನೆಯಿದೆ. ಇದಕ್ಕೆ ಪೂರಕವಾದ ಮುತುವಜರ್ಿಯನ್ನು ಆಯಾ ಸಮುದಾಯದವರೇ ವಹಿಸಿದಲ್ಲಿ ಕಾರ್ಯಕ್ರಮ ಸುಂದರವಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ.ತುಳುನಾಡಿನ ಕಸುಬು, ತಿನಿಸುಗಳನ್ನು ಪ್ರದರ್ಶನ ಮಾಡಲು ಮಾತ್ರವಲ್ಲ ಮಾರಾಟ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗುವುದು. ತುಳುಸಿರಿ ಕಾರ್ಯಕ್ರಮದ ಕುರಿತು ಮೂಡುಬಿದರೆ ಹಾಗೂ ಸುತ್ತಮುತ್ತಲಿನ ಊರುಗಳ ಗ್ರಾಮಾಂತರ ಪ್ರದೇಶಗಳಲ್ಲಿ ಸಮಾಲೋಚನೆ ಸಭೆಯನ್ನೂ ನಡೆಸುವಲ್ಲಿ ಪ್ರಮುಖರು ಆಸಕ್ತಿ ವಹಿಸಬಹುದು ಎಂದರು.
ಕಾರ್ಯಕ್ರಮ ರೂಪುರೇಷೆಗಳ ಕುರಿತು ಚಚರ್ೆ ನಡೆಯಿತು.
ಮಾಜಿ ಸಚಿವ ಆಳ್ವಾಸ್ ಸಂಸ್ಥೆ ಟ್ರಸ್ಟಿ ಕೆ.ಅಮರನಾಥ ಶೆಟ್ಟಿ, ಮೂಡುಬಿದರೆ ಪುರಸಭಾ ಅಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ., ಮೂಡುಬಿದರೆ ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್, ಕಾಯರ್ಾಧ್ಯಕ್ಷ ಚಂದ್ರಹಾಸ್ ದೇವಾಡಿಗ, ತುಳು ಸಾಹಿತಿ ಜಯಂತಿ.ಎಸ್.ಬಂಗೇರ, ನಾರಯಣ.ಪಿ.ಎಂ, ಜಗದೀಶ್ ಅಧಿಕಾರಿ, ಸುಚರಿತ ಶೆಟ್ಟಿ, ದಿವಾಕರ ಶೆಟ್ಟಿ ತೋಡಾರು ಮೊದಲಾದವರು ಉಪಸ್ಥಿತರಿದ್ದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.
………….
ತುಳು ಕಾರ್ಯಕ್ರಮವೂ ಕೇವಲ ತುಳುನಾಡಿನ ವೈವಿದ್ಯತೆಯನ್ನು ಪ್ರದೇಶಿಸುವುದು ಮಾತ್ರವಲ್ಲ. ತುಳುನಾಡಿನ ಬಗ್ಗೆ ಮಾಹಿತಿ ನೀಡುವ, ತುಳು ಭಾಷಾ ವೈವಿದ್ಯತೆಗಳನ್ನು ಬಿಂಬಿಸುವ ಕಾರ್ಯಕ್ರಮವಾಗಿ ಮೂಡಿಬರಬೇಕಾಗಿದೆ.
-ಡಾ.ಎಂ.ಮೋಹನ್ ಆಳ್ವ
ಅಧ್ಯಕ್ಷರು, ಆಳ್ವಾಸ್ ಸಂಸ್ಥೆ ಮೂಡುಬಿದರೆ
…………………
ಎಂಬಿಡಿ_ಅಕ್ಟೋಬರ್27_4
ಆಳ್ವಾಸ್ ನುಡಿಸಿರಿಯಲ್ಲಿ ತುಳುಸಿರಿ ಕಾರ್ಯಕ್ರಮದ ಬಗ್ಗೆ ಸಮಾಲೋಚನೆ ನಡೆಯಿತು,
………….

By suddi9

Leave a Reply

Your email address will not be published. Required fields are marked *