ಮುಂಬಯಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್‌ಇ) ೨೦೨೧ನೇ ಸಾಲಿನ ೧೦ನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಮಹಾನಗರದಲ್ಲಿನ ರಾಯಾನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ಈ ಬಾರಿಯೂ ೧೦೦ ಪ್ರತಿಶತ ಫಲಿತಾಂಶಕ್ಕೆ ಪಾತ್ರರಾಗಿ ದಾಖಲೆ ನಿರ್ಮಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಸರ್ವೋತ್ಕೃಷ್ಟ ಅಂಕಗಳನ್ನು ಪಡೆದಿದ್ದಾರೆ.Ryan's 5 Students

ರಾಯಾನ್ ಇಂಟರ್‌ನೇಶನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಸೈಂಟ್ ಜೋಸೆಫ್ ಹೈಸ್ಕೂಲ್ ಪನ್ವೇಲ್ ಶಾಲೆಯ ದೂರ್ವಾ ಭೋಸ್ಲೆ ಮತ್ತು ಪ್ರಸೂನ್ ಶ್ರೀವಾತ್ಸವ್ ೯೯.೪೦%, ಪ್ರಾಂಜಲ್ ಮಾಲ್ಪಾನಿ ೯೮.೬೦%, ರಾಯಾನ್ ಇಂಟರ್‌ನ್ಯಾಷನಲ್ ಸಾನ್ಪಾಡ ಶಾಲೆಯ ಮಿನೌಟಿ ದಿಘೆ ೯೯.೨೦%, ರಾಯಾನ್‌ಸ್ ಕಾಂದಿವಿಲಿ ಶಾಲೆಯ ಅಂಕಿತಾ ಮಂಡಲ್ ೯೯% ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ರಾಯಾನ್ ಇಂಟರ್‌ನ್ಯಾಷನಲ್ ಶಾಲೆಗಳು ಮಕ್ಕಳ ಪಾಲಕರಿಗೆ ಮೊದಲ ಆಯ್ಕೆ ಯಾಕಾಗಿದೆ ಮತ್ತು ಇದರ ವಿಶ್ವಾಸ ಏನು ಎಂಬುದನ್ನು ಮತ್ತೊಮ್ಮೆ ೧೦೦ ಪ್ರತಿಶತ ಫಲಿತಾಂಶದೊಂದಿಗೆ ಸಾಬೀತುಪಡಿಸಿವೆ. ವರ್ಷದಿಂದ ವರ್ಷಕ್ಕೆ, ರಾಯಾನೈಟ್ಸ್ ನ ಶೈಕ್ಷಣಿಕ ಫಲಿತಾಂಶಗಳು ಉತ್ಕೃಷ್ಟವಾಗಿ ಸಾಗುತ್ತಿವೆ. ರಾಯಾನೈಟ್ಸ್ ಎಲ್ಲಾ ವಿದ್ಯಾರ್ಥಿಗಳಲ್ಲೂ ವೈಯಕ್ತಿಕ ಗಮನವನ್ನು ನೀಡುತ್ತಿದ್ದು ಹಲವು ದಶಕಗಳಿಂದ ತನ್ನ ಪ್ರತಿಷ್ಠೆಯನ್ನು ರೂಢಿಸಿ ಕೊಂಡಿದ್ದು ಎಲ್ಲರೂ ಮೆಚ್ಚುಗೆ ಪಡೆದಿರುವ ಪ್ರಬಲ ಶೈಕ್ಷಣಿಕ ಪ್ರಕ್ರಿಯೆಗಳಿಗೆ ಸಾಕ್ಷಿಯಾಗಿದೆ ಎಂದು ರಾಯಾನ್ ಇಂಟರ್‌ನೇಶನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಡಾ| ಗ್ರೇಸ್ ಪಿಂಟೋ ಸಂತಸ ವ್ಯಕ್ತಪಡಿಸಿದ್ದಾರೆ.

ರಾಯಾನ್ ಗ್ರೂಪ್ ತಮ್ಮ ವಿದ್ಯಾರ್ಥಿಗಳಿಗೆ ಗಮನಾರ್ಹವಾಗಿ ಮಾಡಿದ ಶ್ರಮವು ಫಲ ನೀಡಿತು. ಯಶಸ್ಸಿನ ಬಗ್ಗೆ ಮಾತನಾಡಿದ ದೂರ್ವಾ ಭೋಸ್ಲೆ, ಸೇಂಟ್ ಜೋಸೆಫ್ ಹೈಸ್ಕೂಲ್ ಸಿಬಿಎಸ್‌ಇ ವಿಭಾಗದಲ್ಲಿ ಪನ್ವೇಲ್‌ಗೆ ಟಾಪರ್ ಆಗಿದ್ದಾರೆ. ರಾಯಾನ್‌ಸ್ ಸಮೂಹದ ಸಂಸ್ಥಾಪಕ, ಕಾರ್ಯಾಧ್ಯಕ್ಷ ಸರ್ ಡಾ| ಎ.ಎಫ್ ಪಿಂಟೋ ಮತ್ತು ನಮ್ಮ ಪ್ರೀತಿಯ ಮೇಡಂ ಗ್ರೇಸ್ ಪಿಂಟೋ ಅವರ ಅನನ್ಯ ಪ್ರೋತ್ಸಾಹ, ಪ್ರೇರಣೆಯ ಫಲವೇ ನನ್ನ ಈ ಸಾಧನೆಗೆ ಮೂಲಕಾರಣ. ಅವರಿಬ್ಬರೊಂದಿಗೆ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಶಾಲಾ ಸಿಬ್ಬಂದಿಗಳಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುವೆ. ಕೊರೋನಾ ಸಾಂಕ್ರಮಿಕದ ಸವಾಲಿನ ಸಮಯದಲ್ಲೂ ಸಹಕರಿಸಿದ್ದಾರೆ. ಅಂತೆಯೇ ನನ್ನ ಹೆತ್ತವರು ಕೂಡಾ ನನಗೆ ಸಹಕಾರಿಯಾಗಿದ್ದರು. ಸಾಂಕ್ರಾಮಿಕದ ನಡುವೆ ನಮ್ಮ ಸಂಸ್ಥೆಗಳು ನಮ್ಮ ಶಾಲೆಯಲ್ಲಿ ರಾಯಾನ್ ಓಎಸ್ ವ್ಯವಸ್ಥೆಯನ್ನು ಪರಿಚಯಿಸಿದ್ದು ನಾವು ಕೃತಜ್ಞರಾಗಿರುತ್ತೇವೆ.ಈ ಕಾರಣದಿಂದಾಗಿ ನಮ್ಮ ಅಧ್ಯಯನಗಳು ಸಮತೋಲಿತವಾಗಿವೆ ಎಂದು ದೂರ್ವಾ ಭೋಸ್ಲೆ ತಿಳಿಸಿದ್ದಾರೆ.

ಪ್ರಸೂನ್ ಶ್ರೀವಾಸ್ತವ್ ಮಾತನಾಡಿ ನಾನು ೯೯.೪೦% ಅಂಕಗಳನ್ನು ಗಳಿಸಲು ಉತ್ಸುಕನಾಗಿದ್ದೇನೆ. ಮುಂದೆ ನಾನು ಏನನ್ನು ಮುಂದುವರಿಸುತ್ತೇನೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿದೆ. ನಮ್ಮ ಶಿಕ್ಷಕರೆಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವರು ಶಿಕ್ಷಣ ಪ್ರಯಾಣದುದ್ದಕ್ಕೂ ನಮಗಾಗಿ ಕಷ್ಟಪಟ್ಟಿರುವರರು. ಲಾಕ್‌ಡೌನ್ ಸಮಯದ ಲ್ಲೂ ನಿರಂತರ ಮಾರ್ಗದರ್ಶನ ಮತ್ತು ಪ್ರೇರಣೆಯನ್ನಿತ್ತು ಹೊಸ ವಿಧಾನಗಳನ್ನು ಪರಿಚಯಿಸಿದ್ದಕ್ಕಾಗಿ ಶಾಲಾ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಮತ್ತು ಸವಾಲಿನ ಸಮಯದಲ್ಲಿ ನನ್ನ ಪೋಷಕರು ನನ್ನ ಬೆಂಬಲವಾಗಿದ್ದ ಕಾರಣ ಫಲಿತಾಂಶವನ್ನು ಎಲ್ಲಾ ರಾಯನೈಟ್‌ಗಳಿಗೆ ಸಮರ್ಪಿಸುವೆ ಎಂದರು.

ವಿದ್ಯಾರ್ಥಿಗಳ ಯಶಸ್ಸಿಗೆ ಅಭಿನಂದನೆ ಸಲ್ಲಿಸುತ್ತಿರುವಾಗ, ರಾಯಾನ್ ಗ್ರೂಪ್ ಆಫ್ ಸ್ಕೂಲ್‌ಗಳ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೊ, ” ಇಡೀ ಜಗತ್ತೇ ಎದುರಿಸುತ್ತಿರುವ ಪರಿಸ್ಥಿತಿಯ ಹೊರತಾಗಿಯೂ ಇನ್ನೂ ಒಂದು ವರ್ಷದವರೆಗೆ ನಮ್ಮ ವಿದ್ಯಾರ್ಥಿಗಳ ಪ್ರಭಾವಶಾಲಿ ಪ್ರದರ್ಶನವನ್ನು ನೋಡಿ ನಾವು ಉತ್ಸುಕರಾಗಿದ್ದೇವೆ. ೨೦೨೧ನೇ ಸಾಲಿನ ಸಿಬಿಎಸ್‌ಇ ಬೋರ್ಡ್ ೧೦ನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಅತ್ಯುತ್ತಮ ಫಲಿತಾಂಶಕ್ಕಾಗಿ ಭಗವಂತನಿಗೆ ಪ್ರಶಂಸಿಸುವೆ. ರಾಯಾನ್ಸ್ನ ಶಿಕ್ಷಣದಲ್ಲಿ ನಾವು ಶ್ರೇಷ್ಠತೆಯನ್ನು ನಂಬುತ್ತೇವೆ. ತಲ್ಲೀನಗೊಳಿಸುವ ಕಲಿಕೆಯ ಅನುಭವದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ತಂತ್ರಜ್ಞಾನ ಮತ್ತು ಅದರ ಪರಿಕರಗಳ ಮೇಲೆ ನಮ್ಮ ಗಮನ ಇರಿಸುತ್ತಿದ್ದೇವೆ. ಪ್ರಸ್ತುತ ಸನ್ನಿವೇಶದ ಮಧ್ಯದಲ್ಲಿ, ಈ ಸವಾಲಿನ ಸಮಯದಲ್ಲಿ ನಮ್ಮ ಎಲ್ಲಾ ಶ್ರಮಕ್ಕೆ ಪ್ರತಿಫಲ ದೊರೆತಿರುವುದಕ್ಕೆ ನಮಗೆ ಅತೀವ ಸಂತೋಷವಾಗಿದೆ.

ವಿದ್ಯಾರ್ಥಿಗಳ ಪ್ರಯತ್ನಗಳಿಗಾಗಿ ನಾವು ಎಲ್ಲಾ ರಾಯನೈಟ್‌ಗಳನ್ನು ಅಭಿನಂದಿಸುತ್ತೇವೆ ಮತ್ತು ಭವಿಷ್ಯದಲ್ಲಿ ಅವರಿಗೆ ಯಶಸ್ಸನ್ನು ಬಯಸುತ್ತೇವೆ. ವಿದ್ಯಾರ್ಥಿಗಳ ಪೋಷಕರ ನಿರಂತರ ಬೆಂಬಲ ಮತ್ತು ನಮ್ಮಲ್ಲಿನ ಆಗಾಧ ವಿಶ್ವಾಸಕ್ಕಾಗಿ ನಾವು ಆಭಾರಿಗಳಾಗಿದ್ದೇವೆ. ನಮ್ಮ ಶಿಕ್ಷಕರ ನಿರಂತರ ಬದ್ಧತೆಗಾಗಿ ಮತ್ತು ಶಿಕ್ಷಣ ಮಂಡಳಿಯು ಘೋಷಿಸಿದ ಗುರುತು ವ್ಯವಸ್ಥೆಯ ಬದಲಾವಣೆಗಳನ್ನು ಸ್ವೀಕರಿಸಲು ಮತ್ತು ಅದಕ್ಕೆ ತಕ್ಕಂತೆ ಕೆಲಸ ಮಾಡಲು ನಾವು ಅವರಿಗೆ ಧನ್ಯವಾದಗಳು. ಮುಂದೆಯೂ ನಾವು ನಮ್ಮ ಯುವ ಭವಿಷ್ಯದ ನಾಯಕರಿಗೆ ಶಿಕ್ಷಣದ ಮೂಲಕ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಮಗ್ರ ಅಭಿವೃದ್ಧಿಯ ನಮ್ಮ ದೃಷ್ಟಿ ಮತ್ತು ಧ್ಯೇಯಕ್ಕೆ ಬದ್ಧರಾಗಿರುತ್ತೇವೆ ಎಂದು ರಾಯಾನ್ ಇಂಟರ್‌ನೇಶನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಪ್ರವರ್ತಕಿ ಮೇಡಂ ಡಾ| ಗ್ರೇಸ್ ಪಿಂಟೋ ಅಭಿಮಾನದಿಂದ ಸಂತಸ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *