ಮುಂಬಯಿ : ದ.ಕ ಜಿಲ್ಲಾ (ಮಂಗಳೂರು) ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಇವರು ಮೂಡುಬಿದಿರೆ ಶ್ರೀ ಜೈನ ಮಠ ಚಾತುರ್ಮಾಸ ನಿರತ ೧೦೮ ದಿವ್ಯ ಸಾಗರ ಮುನಿ ಹಾಗೂ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇದರ ಶ್ರೀ ಜೈನ ಮಠದ ಸ್ವಸ್ತಿಶ್ರೀ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರನ್ನು ಕಳೆದ ರವಿವಾರ ಭೇಟಿ ಮಾಡಿ ಅನುಗ್ರಹ ಆಶೀರ್ವಾದ ಪಡೆದರು. ಈ ಸಂದರ್ಭ ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಅವರು ರಾಜೇಂದ್ರ ಕುಮಾರ್ಗೆ ಶಾಲು ಹಾರ ಹಾಕಿ ಶ್ರೀಫಲ ನೀಡಿ ಹರಸಿ ಆಶೀರ್ವಾದ ಮಾಡಿದರು.

