ಮುಂಬಯಿ : ಸುಮಾರು ಮೂರು ದಶಕಗಳಿಂದ ಆಕಾಶವಾಣಿಯಲ್ಲಿ ಸೇವೆಯ ಬಳಿಕ ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಹಾಗೂ ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ಅವರನ್ನು ವೃತ್ತಿಜೀವನದಿಂದ ಇಂದಿಲ್ಲಿ ನಿವೃತ್ತರಾಗಿದ್ದು ಆಕಾಶವಾಣಿ ಸಿಬ್ಬಂದಿ ಬಳಗವು ಕಾರ್ಯಕ್ರಮ ಮುಖ್ಯಸ್ಥ ಅನಿಲ್ ಕುಮಾರ್ ಹೆಚ್.ಎನ್ ನೇತೃತ್ವದಲ್ಲಿ ಕೇಂದ್ರದಲ್ಲಿ ಏರ್ಪಡಿಸಲಾದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಟ್ಟು ಅಭಿವಂದಿಸಿದರು.Screenshot_20210731-144522_WhatsAppಈ ಸಂದರ್ಭದಲ್ಲಿ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ, ಸೋಮಶೇಖರ್ ಎಸ್ ರುಳಿ, ಅನೌನ್ಸರ್ ಶಾರದಾ ಜಂಬಲದಿನ್ನಿ, ಪ್ರಸಾರ ನಿರ್ವಾಹಕ ಸಂಗಮೇಶ್, ಲೆಕ್ಕಾಧಿಕಾರಿ ವಿಜಯ ಕುಮಾರ್, ತಾಂತ್ರಿಕ ವಿಭಾಗದ ಜಿ.ವಿ ಕುಲಕರ್ಣಿ, ಮೊಹಮದ್ ಅಬ್ದುಲ್ ರೌಫ್, ಸುರೇಶ್, ಜ್ಯೋತಿ ಆರ್.ಕುಲಕರ್ಣಿ, ರಾಹುಲ್ ಕುಲಕರ್ಣಿ , ವೆಂಕಟೇಶ್ ಕುಲಕರ್ಣಿ, ಶಿವಪುತ್ರಪ್ಪ, ದೇವಿಂದ್ರಪ್ಪ, ಶೋಭಾ ಪಾಟೀಲ್, ಲಕ್ಷಿ ್ಮಕಾಂತ್ ಪಾಟೀಲ್, ಮಧು ದೇಶಪಾಂಡೆ, ಮೇಘನಾ ಪಾಟೀಲ್, ಪಲ್ಲವಿ ಕುಲಕರ್ಣಿ, ರೇಖಾ, ಸತ್ಯನಾರಾಯಣ, ನಿರ್ಮಲಾ, ವೀಣಾ ಕುಲಕರ್ಣಿ, ಅವಿನಾಶ್, ತಪಿತಾ, ಶಿವ ಕುಮಾರ್, ದತ್ತಾತ್ರೇಯ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಬೀದರ್ ಜಿಲ್ಲೆಯ ಹುಮ್ನಾಬಾದ್ ಸಮೀಪದ ಮುತ್ತಂಗಿ ಗ್ರಾಮದ ಮೂಲತಃ ರಾಜೇಂದ್ರ ಮಾನ್ವಿಯಲ್ಲಿ ಉಪನ್ಯಾಸಕ ಹಾಗೂ ಕೃಷಿ ಬೀಜ ಕಂಪನಿಯಲ್ಲಿ ಉದ್ಯೋಗ ಮಾಡಿ ನಂತರ ಧಾರವಾಡ ಆಕಾಶವಾಣಿಗೆ ಕೃಷಿ ರಂಗ ವಿಭಾಗಕ್ಕೆ ಆಯ್ಕೆ ಹೊಂದಿ ಅಲ್ಲಿ ಎರಡು ವರ್ಷ ನಂತರ ಕಲಬುರಗಿಯಲ್ಲಿ ಸೇವೆ ನಿರತರಾಗಿ ೨೦೦೮ರಲ್ಲಿ ಮೈಸೂರಿಗೆ ವರ್ಗವಾಗಿದ್ದರು. ೨೦೦೯ರಲ್ಲಿ ಮರಳಿ ಕಲಬುರಗಿಗೆ ವರ್ಗಾವಣೆ ಹೊಂದಿ ಕಾರ್ಯಕ್ರಮ ನಿರ್ವಾಹಕ ಹುದ್ದೆ, ಕಾರ್ಯಕ್ರಮ ಮುಖ್ಯಸ್ಥರಾಗಿ ಮತ್ತು ನಿಲಯದ ಮುಖ್ಯಸ್ತ ರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದರು. ಇವರು ಕೃಷಿ ರಂಗ ವಿಭಾಗದಲ್ಲಿ ರಾಜಣ್ಣ ಪಾತ್ರ ಮೂಲಕ ಕೇಳುಗರ ನಡುವೆ ಜನಪ್ರಿಯರಾಗಿದ್ದರು. ತೊಗರಿ, ಸಾವಯವ ಕೃಷಿ, ಜೇನು ಕೃಷಿ ಹೀಗೆ ಹಲವು ಸರಣಿ ಕಾರ್ಯಕ್ರಮ ನಿರ್ಮಾಣ ಮಾಡಿದ್ದರು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಬಾನುಲಿ ಪುರಸ್ಕಾರ ಹಾಗೂ ವಾಣಿಜ್ಯ ಗಳಿಕೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕಲಬುರಗಿ ಕೇಂದ್ರಕ್ಕೆ ಹೆಸರು ಬರುವಂಡ್ ಮಾಡಿದ್ದರು. ಕೃಷಿ ವಿಭಾಗದ ಜೊತೆಗೆ ಯುವವಾಣಿ,ಸಂಗೀತ ಜಾನಪದ ವಿಭಾಗಳಲ್ಲೂ ಕಾರ್ಯಕ್ರಮ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದರು.

ಆಕಾಶವಾಣಿ ಕಾರ್ಯಕ್ರಮ ಸಿಬ್ಬಂದಿ ಸಂಘದ ಕಲಬುರಗಿ ಘಟಕದ ಕಾರ್ಯದರ್ಶಿಯಾಗಿ ನಿರಂತರವಾಗಿ ಮುಂದುವರಿದು, ಪ್ರಧಾನಿ, ಕೇಂದ್ರ ಸಚಿವರ ಭೇಟಿ ಮಾಡಿದ ನಿಯೋಗದಲ್ಲಿದ್ದು ಕಾರ್ಯಕ್ರಮ ಸಿಬ್ಬಂದಿಗಳ ಸಮಸ್ಯೆಗೆ ಸ್ಪಂದಿಸಿದರು.ಅನೇಕ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ವಿಚಾರ ಮಂಡನೆ ಮಾಡಿದ್ದರು.

ಕಲಬುರಗಿ ಆಕಾಶವಾಣಿ ನ್ಯೂಸ್ ಏರ್ ಆಪ್ ಅನುಷ್ಠಾನ, ೮೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೇರಪ್ರಸಾರ ಹೊಣೆ, ಅಖಿಲ ಭಾರತ ರಾಷ್ಟ್ರೀಯ ಸಂಗೀತ ಸಮ್ಮೇಳನ ಆಯೋಜನೆ, ನಿಲಯದ ಸುವರ್ಣ ಮಹೋತ್ಸವ ಆಚರಣೆ ನಿರ್ವಹಣೆ ಮಾಡಿದ ಅನುಭವಿ ಮತ್ತು ಕೃಷಿ ಮಾಧ್ಯಮ ತಜ್ಞರೆಣಿಸಿದ್ದರು.

By suddi9

Leave a Reply

Your email address will not be published. Required fields are marked *