ಬಂಟ್ವಾಳ: ಪಿಯುಸಿಯಲ್ಲಿ ಶೇ. 99(594) ಅಂಕ ಪಡೆದ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿನಿ, ಆರಂಬೋಡಿ ಗ್ರಾಮದ ಉಮನ್ನೊಟ್ಟು ಕೃಷ್ಣ ಶೆಟ್ಟಿ ದಂಪತಿಯ ಪುತ್ರಿ ಕೃತಿ ಅವರನ್ನು ರೋಟರಿಕ್ಲಬ್ಲೊರೆಟ್ಟೊ ಹಿಲ್ಸ್ ಬಂಟ್ವಾಳ ಇದರ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ರಾಘವೇಂದ್ರ ಭಟ್, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ಆಂಟನಿ ಸಿಕ್ವೆರಾ, ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ, ಪದಾಧಿಕಾರಿಗಳಾದ ರಾಮಚಂದ್ರ ಶೆಟ್ಟಿಗಾರ್, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಹರಿಪ್ರಸಾದ್ ಶೆಟ್ಟಿ, ಐವಾನ್ ಮಿನೇಜಸ್, ನಿತೇಶ್ ಕುಂಜಾಡಿ, ಆರಂಬೋಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಸದಸ್ಯೆ ವಿಜಯಾ, ತಾ.ಪಂ. ನಿಕಟಪೂರ್ವ ಸದಸ್ಯ ರಮೇಶ್ ಪೂಜಾರಿ ಕುಡ್ಮೇರು ಮತ್ತಿತರರು ಉಪಸ್ಥಿತರಿದ್ದರು.
