ಮುಂಬಯಿ : ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದ ೨೦೨೦-೨೧ನೇ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಸೈಂಟ್ ಬ್ಲೆಸ್ ಹೈಸ್ಕೂಲ್ ಆಂಬೊಲಿ ಇದರ ವಿದ್ಯಾರ್ಥಿನಿ ಕು| ನಿಧಿ ಭಾಸ್ಕರ್ ಕೋಟ್ಯಾನ್ ೯೫.೮೦% ಅಂಕಗಳೊಂದಿಗೆ ತೇರ್ಗಡೆ ಆಗಿದ್ದಾರೆ.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿರುವ ಕು| ನಿಧಿ ಅಂಧೇರಿ ಪೂರ್ವದ ನಿವಾಸಿ ಮೂಲತಃ ಕುಬೇವೂರು ದುರ್ಗದಯಾ ನಿವಾಸ ಭಾಸ್ಕರ್ ವಿ.ಕೋಟ್ಯಾನ್ ಮತ್ತು ಕವತ್ತಾರು ರಾಮ್ ನಿವಾಸ ರಮಾ ಭಾಸ್ಕರ್ ಕೋಟ್ಯಾನ್ ಇವರ ಸುಪುತ್ರಿಯಾಗಿದ್ದಾಳೆ.
