ಕೈಕಂಬ: ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಬಳ್ಳಾಜೆ ಉಗ್ರಾಯ್ ಎಂಬಲ್ಲಿ ಪಲ್ಗುಣಿ ನದಿಯಲ್ಲಿ ಸೋಮವಾರ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ. ಇಲ್ಲಿನ ತೋಟವೊಂದರ ಸಮೀಪ ನದಿಯಲ್ಲಿ ಶವ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಲ್ಲಿನ ಎ.ಆರ್.ಟಿ ತಂಡದ ಸದಸ್ಯರ ನೆರವಿನಿಂದ ಶವವನ್ನು ಮೇಲಕ್ಕೆತ್ತಿದ್ದಾರೆ.
ಅಂದಾಜು 65 ವರ್ಷ ವಯಸ್ಸಿನ ಗಂಡಸಿನ ಶವ ಗುರುತು ಪತ್ತೆ ಹಚ್ಚಲು ಸಾಧ್ಯವಾಗದಷ್ಟು ವಿಕಾರವಾಗಿದ್ದು ನಾಲ್ಕೈದು ದಿನಗಳ ಹಿಂದೆ ನದಿಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.
ಆದಿತ್ಯವಾರ ಇಲ್ಲಿನ ದೊಡ್ಡಳಿಕೆ ಎಂಬಲ್ಲಿ ನದಿಯಲ್ಲಿ ಶವ ತೇಲುತ್ತಿದ್ದುದನ್ನು ಕಂಡಿದ್ದ ಕೆಲವರು ಅದನ್ನು ದಡಕ್ಕೆ ತರಲು ಪ್ರಯತ್ನ ನಡೆಸಿದ್ದು ಭಾರೀ ನೀರಿನ ಸೆಳೆತದ ಕಾರಣದಿಂದ ವಿಫಲವಾಗಿದ್ದರು.ಇದು ಅಲ್ಲಿಂದ ಮುಂದೆ ಬಳ್ಳಾಜೆ ಉಗ್ರಾಯ್ ಎಂಬಲ್ಲಿ ಶವ ನದಿಯ ದಡದಲ್ಲಿ ಪತ್ತೆಯಾಗಿದೆ. ಬಜಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
