ವಿಟ್ಲ : ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇದರ ವತಿಯಿಂದ ವೈದ್ಯಾಧಿಕಾರಿ ಡಾ| ವೇದಾವತಿ ಬಲ್ಲಾಳ್ ಇವರ ನೇತೃತ್ವದೊಂದಿಗೆ ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ‘ಮಲೇರಿಯಾ, ಡೆಂಗ್ಯೂ ವಿರೋಧ ಮಾಸಾಚರಣಾ’ ಕಾರ್ಯಕ್ರಮ ನಡೆಯಿತು.
ಸಮುದಾಯ ಆಸ್ಪ÷ತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ| ಜಯಪ್ರಕಾಶ್ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ, ಆರೋಗ್ಯ ಸಹಾಯಕಿಯರಾದ, ಚಂದ್ರಾವತಿ, ದೀಪ, ಸುಶೀಲ, ಮತ್ತು ಜ್ಯೋತಿ, ಅಣ್ಣಪ್ಪ ಸಾಸ್ತಾನ, ಸತೀಶ್ ಆಳ್ವ, ಸುದರ್ಶನ ಪಡಿಯಾರ್, ಸಂದೇಶ್ ಶೆಟ್ಟಿ, ವೆರೋನಿಕ, ಸೌಮ್ಯ, ಗೀತಾವತಿ ಮೊದಲಾದವರು ಉಪಸ್ಥಿತರಿದ್ದರು.
