ವಿಟ್ಲ : ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ ಮತ್ತು ತಂಡದವರು, ಸಿಡಿಲು ಬಡಿದು ಹಾನಿಗೊಳಗಾದ ವೀರಕಂಬ ಗ್ರಾಮದ ಕಲ್ಮನೆ ನಿವಾಸಿ ರಘುರಾಮ ಶೆಟ್ಟಿಯವರ ಮನೆಗೆ ಬೇಟಿ ನೀಡಿ ಧನ ಸಹಾಯ ಮಾಡಿದರು.
ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಸದಸ್ಯರುಗಳಾದ ಮಹಮ್ಮದ್ ಇಕ್ಬಾಲ್, ದೇವಿಪ್ರಸಾದ್ ಶೆಟ್ಟಿ ಮತ್ತು ಮಾಜಿ ಲಯನ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
