ವಿಟ್ಲ : ಪಡಿ ಬಾಗಿಲು ಶಾಲೆಯಲ್ಲಿ ವನಮಹೋತ್ಸವ ಮತ್ತು ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು. SDMC ಅಧ್ಯಕ್ಷ ರಾದ ಶ್ರೀ ಬಾಲಕೃಷ್ಣ ಕಾರಂತ ರು ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.SHV_1347 ವಿದ್ಯಾಸಿರಿ ಶಿಕ್ಷಣ ಕೇಂದ್ರದ ಅಧ್ಯಕ್ಷ ರಾದ ಶ್ರೀ ಪ್ರಭಾಕರ ಶೆಟ್ಟಿ, ಗೌರವಾಧ್ಯಕ್ಷ ಶ್ರೀ ಲಿಂಗಪ್ಪ ಗೌಡ, ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಜಗಜೀವನ್ ರಾಮ್, ಶ್ರೀ ಪುರುಷೋತ್ತಮ, ಶ್ರೀ ಮತಿ ಮೋಹಿನಿ SDMC ಉಪಾಧ್ಯಕ್ಷೆ ಶ್ರೀಮತಿ ರೇಖಾ ಹಾಗೂ ಸದಸ್ಯರು , ಮಾಜಿ ಸೈನಿಕರು ಹಾಗೂ ಶಾಲಾ ಹಿತಚಿಂತಕ ರಾದ ಶ್ರೀ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ನ್ನು ಸನ್ಮಾನಿಸಿ ಕಿಟ್  ವಿತರಿಸಲಾಯಿತು. ವನಮಹೋತ್ಸವ ಅಂಗವಾಗಿ ಗಿಡ ನೆಡಲು ಶಾಲೆಗೆ ಗಿಡ ಹಸ್ತಾಂತರಿಸಿದರು. ವಿದ್ಯಾಸಿರಿ ಶಿಕ್ಷಣ ಕೇಂದ್ರದ ಅಧ್ಯಕ್ಷ ರಾದ ಶ್ರೀ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. SDMC ಅಧ್ಯಕ್ಷ ರಾದ ಶ್ರೀ ಬಾಲಕೃಷ್ಣ ಕಾರಂತ ರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ  ಧನ್ಯವಾದ ಸಲ್ಲಿಸಿದರು. ಶ್ರೀ ಮತಿ ಪುಷ್ಪಾ ವತಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *