ಬಂಟ್ವಾಳ : ತಾಲ್ಲೂಕಿನಲ್ಲಿ ಕಳೆದೆ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆ ಶುಕ್ರವಾರ ಕಡಿಮೆಯಾಗಿದ್ದು, ನೇತ್ರಾವತಿ ನದಿಯಲ್ಲಿ ನೆರೆ ಇಳಿಕೆಯಾಗಿದೆ.

ಇಲ್ಲಿನ ಬಿ.ಮೂಡ ಗ್ರಾಮದ ಕೈಕಂಬದಲ್ಲಿ ಶೈಲೇಶ್ ಎಂಬವರ ಮನೆ ಛಾವಣಿ ಕುಸಿದು ತೀವ್ರ ಹಾನಿಯಾಗಿದೆ. ಮಾಣಿ ಗ್ರಾಮದ ಪಲ್ಲತಿಲ ನಿವಾಸಿ ವಿಶ್ವನಾಥ ಅವರ ಮನೆಗೆ ಗುಡ್ಡ ಜರಿದು ಹಾನಿಯಾಗಿದೆ. ಮಂಚಿ ಗ್ರಾಮದ ಪತ್ತುಮುಡಿ ನಿವಾಸಿ ಹಂಝ ಎಂಬವರ ಮನೆ ಅವರಣಗೋಡೆ ಕುಸಿದು ಬಿದ್ದು ಮನೆಗೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಏಮಾಜೆ ನಿವಾಸಿ ಲಕ್ಷ್ಮಣ ಮೂಲ್ಯ ಎಂಬವರ ಮನೆಯ ಮೇಲ್ಚಾವಣಿ ಗಾಳಿಗೆ ಹಾರಿ ಹೋಗಿದ್ದು, ಮನೆ ಗೋಡೆಯು ಕುಸಿದಿದೆ. ಇಲ್ಲಿನ ನೇತ್ರಾವತಿ ನದಿಯಲ್ಲಿ 6.4 ಮೀ.ಗೆ ನೆರೆ ಇಳಿಕೆಯಾಗಿದೆ.
Attachments area
