ಬಂಟ್ವಾಳ: ಮೊಡಂಕಾಪು ರೋಟರಿ ಕ್ಲಬ್ ನ ವತಿಯಿಂದ ರೋಟರಿ ಕ್ಲಬ್ ಅಧ್ಯಕ್ಷ ಎಲಿಯಾಸ್ ಸಾಕ್ಟಿಸ್ ಅವರ ನೇತ್ರತ್ವದಲ್ಲಿ ಬಂಟ್ವಾಳ ತಾಲೂಕಿನ 6200 ಎಸ್ .ಎಸ್.ಎಲ್.ಸಿ . ವಿದ್ಯಾರ್ಥಿಗಳಿಗೆ ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ ವಿತರಣಾ ಕಾರ್ಯಕ್ರಮ ಬಿಸಿರೋಡಿನ ಕ್ಷೇತ್ರಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ನಡೆಯಿತು.
ಮಾಸ್ಕ್ ವಿತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸುರಕ್ಷತಾ ದೃಷ್ಟಿಯಿಂದ ಮೊಡಂಕಾಪು ರೋಟರಿ ಕ್ಲಬ್ ಮಾಸ್ಕ್ ನೀಡಿ ಮಕ್ಕಳಿಗೆ ಧೈರ್ಯವನ್ನು ತಂದುಕೊಟ್ಟಿದೆ.ಕಾರ್ಯಕ್ರಮ ದ ನೇತ್ರತ್ವ ವಹಿಸಿದ್ದ ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಎಲಿಯಾಸ್ ಸ್ಯಾಕ್ಟಿಸ್ ಮಾತನಾಡಿ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳು ಆತಂಕದಿಂದ ದೂರವಾಗಿ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡುವ ಕೆಲಸ ಆಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮೊಡಂಕಾಪು ರೋಟರಿ ಕ್ಲಬ್ ಚುನಾಯಿತ ಅದ್ಯಕ್ಷ ರೋ.ಗೋವರ್ಧನ್ ರಾವ್, ಮೊಡಂಕಾಪು ರೋಟರಿ ಕ್ಲಬ್ ಖಜಾಂಚಿ ರೋ.ಶೃತಿ ಮಾಡ್ತ, ಶಿಕ್ಷಣ ಸಂಯೋಜಕಿ ಸುಜಾತ, ದೈಹಿಕ ಪರಿವೀಕ್ಷಕ ವಿಷ್ಣು ಹೆಬ್ಬಾರ್, ಸ್ಕೌಟ್ ಜಿಲ್ಲಾ ಸಂಘಟಕ ಭರತ್ ರಾಜ್, ಸ್ಕೌಟ್ ಜಿಲ್ಲಾ ತರಬೇತಿ ಆಯುಕ್ತ ಪ್ರತಿಮ್ ಕುಮಾರ್ ಎಸ್, ಎಸ್.ಎಸ್.ಎಲ್.ಸಿ.ಸ್ವಯಂ ಸೇವಕರ ಜಿಲ್ಲಾ ನೋಡೆಲ್ ತ್ಯಾಗಂ ಹರೇಕಳ, ಶಿಕ್ಷಕರಾದ ಬಿ.ಮೋಹಮ್ಮದ್ ತುಂಬೆ, ಕೆ.ಜಯಂತ್ ನಾಯಕ್, ಕೆ.ದೇವದಾಸ್, ಉಮರಗಿ ಶರಣಪ್ಪ, ನಾರಾಯಣ ನಾಯಕ್, ರಂಜಿನಿ, ಸುರೇಶ್ ಉಪಸ್ಥಿತರಿದ್ದರು.
