ಕೈಕಂಬ : ದೇವಸ್ಥಾನಗಳಿಂದ ಸಮಾಜಕ್ಕೆ ಧನಾತ್ಮಕ ಸಂದೇಶ ಸಾರುವ ಕೆಲಸಗಳಾಗಬೇಕು. ಅಂದರೆ, ದೇವಾಲಯಗಳು ಸಮಾಜಮುಖಿ ಕೆಲಸದಲ್ಲಿ ನಿರತವಾಗಬೇಕು. ಕುಕ್ಕೆ ದೇವಳ ಸಹಿತ ೧೪ ಕಡೆಗಳಲ್ಲಿ ಇಂದು(ಜು. ೧೩) ಹಣ್ಣಿನ ಗಿಡ ನೆಡಲಾಯಿತು. ಇದೇ ರೀತಿ ಜಿಲ್ಲೆಯ ಎಲ್ಲ ದೇವಸ್ಥಾನಗಳ ಪರಿಸರದಲ್ಲಿ ಸಾಧ್ಯವಿರುವಷ್ಟು ಹಣ್ಣು, ಹೂವು ಹಾಗೂ ಇತರ ಉಪಯುಕ್ತ ಗಿಡ ಬೆಳೆಸಲು ಪ್ರಯತ್ನಿಸಬೇಕು. ಅಲ್ಲದೆ ದೇವಾಲಯಗಳಿಗೆ ಸಂಬಂಧಿಸಿದಂತೆ ಗೋಶಾಲೆ ಸ್ಥಾಪಿಸುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.13vp dharmika02

ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಮಂಗಳವಾರ ನಡೆದ ಜಿಲ್ಲೆಯ ದೇವಾಲಯಗಳ ಧಾರ್ಮಿಕ ದತ್ತಿ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಟ್ರಸ್ಟಿಗಳು, ಆಡಳಿತಾಧಿಕಾರಿಗಳು(ಇಒ) ಹಾಗೂ ಆಡಳಿತ ಮೊಕ್ತೇಸರರ ಅಹವಾಲು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.000

ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮಾತನಾಡಿ, ದೇವಸ್ಥಾನಗಳ ಸಿಬ್ಬಂದಿ ಸಮಸ್ಯೆ ಪರಿಶೀಲಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಬೇಕು. ತ್ಯಾಜ್ಯ ನಿರ್ವಹಣೆಯಿಂದ ದೇವಸ್ಥಾನಕ್ಕೆ ಲಾಭ ಆಗಬೇಕು. ಪ್ರತಿಯೊಂದು ದೇವಸ್ಥಾನಗಳಲ್ಲಿ ಗೋಶಾಲೆ ಸ್ಥಾಪಿಸುವ ಬಗ್ಗೆ ಇಲಾಖೆ ಮತ್ತು ಸರ್ಕಾರ ಕಾರ್ಯ ರೂಪಿಸಲಿದೆ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಮಾತನಾಡಿ, ದೇವಸ್ಥಾನಗಳಲ್ಲಿ ಆಡಳಿತಾಧಿಕಾರಿಗಳಾಗಿ ಗ್ರಾಮ ಲೆಕ್ಕಿಗರು(ವೀಎ) ಕೆಲಸ ಮಾಡುತ್ತಿದ್ದು, ಒಬ್ಬರಿಂದ ಎರಡು ಕಡೆಯಲ್ಲಿನ ಕೆಲಸಕ್ಕೆ ಸಮಸ್ಯೆಯಾಗುತ್ತಿದೆ. ದೇವಸ್ಥಾನಗಳ ಸುರಕ್ಷತೆ ಹಾಗೂ ಆಸ್ತಿಗೆ(ಕಾಣಿಕೆ ಡಬ್ಬಿ) ಆದ್ಯತೆ ನೀಡಬೇಕಿದ್ದು, ಅತ್ಯಾಧುನಿಕ ಕ್ಯಾಮರಾ ಅಳವಡಿಸಬೇಕು. ಈ ಮೂಲಕವೂ ದೇವಸ್ಥಾನಗಳ ಪ್ರಾವಿತ್ರö್ಯತೆ ಕಾಪಾಡಲು ಸಾಧ್ಯವಾಗುತ್ತದೆ. ದೇವಸ್ಥಾನಗಳ ಆದಾಯ ಸದ್ಬಳಕೆಯಾಗಬೇಕು. ಗೋಶಾಲೆ ಸ್ಥಾಪಿಸುವುದರೊಂದಿಗೆ ಗೋವುಗಳ ಸಹಿತ ಇತರ ಪ್ರಾಣಿಗಳಿಗೆ ರಕ್ಷಣೆ ಒದಗಿಸಬೇಕು. ದೇವಸ್ಥಾನದ ಆಸ್ತಿ ಅತಿಕ್ರಮಣವಾಗದಂತೆ ಬೇಲಿ ನಿರ್ಮಿಸಬೇಕು. ಈ ನಿಯಮ ದೈವಸ್ಥಾನಗಳಿಗೂ ಅನ್ವಯವಾಗಬೇಕು ಎಂದರು.

ಪೊಳಲಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ನದಿ ತಟಕ್ಕೆ ಹೊಂದಿಕೊAಡಿರುವ ಸರ್ಕಾರಿ ಮತ್ತು ಖಾಸಗಿಯವರ ವಿಶಾಲ ಖಾಲಿ ಜಾಗದಲ್ಲಿ ಗೋಶಾಲೆ ಸ್ಥಾಪಿಸಲು ಸ್ಥಳ ಗುರುತಿಸಿದ್ದೇವೆ. ಇಲ್ಲಿ ಗೋಶಾಲೆ ಸ್ಥಾಪಿಸಬೇಕೆಂಬುದು ಬಹುದಿನಗಳ ಕನಸಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ದೇವಸ್ಥಾನಗಳ ಪ್ರಮುಖರು ಕೆಲವು ಮಹತ್ವದ ವಿಷಯ, ಬೇಡಿಕೆಗಳ ಬಗ್ಗೆ ಪ್ರಸ್ತಾವಿಸಿದ್ದು, ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಬಹುತೇಕ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ಸಚಿವ ಕೋಟ ಉತ್ತರಿಸಿದರು.

ಸಭೆಯಲ್ಲಿ ಜಿಲ್ಲೆಯ ಬಹುತೇಕ `ಎ’, `ಬಿ’ ಗ್ರೇಡ್ ದೇವಸ್ಥಾನಗಳ ಪ್ರಮುಖರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಧಾರ್ಮಿಕ ಪರಿಷತ್ತು ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಧಾರ್ಮಿಕ ಪರಿಷತ್ ಸದಸ್ಯ ಗೋವಿಂದ ಭಟ್, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅನುವಂಶಿಕ ಮೊಕ್ತೇಸರರಾದ ಯು ತಾರನಾಥ ಆಳ್ವ , ಪವಿತ್ರಪಾಣಿ ಮಾಧವ ಭಟ್, ಚೇರಾ ಸೂರ್ಯನಾರಾಯಣ ರಾವ್, ಮತ್ತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಿ ಜಯಮ್ಮ, ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ವರ್ಗ, ಬಂಟ್ವಾಳ ತಹಶೀಲ್ದಾರ್ ಎಸ್ ಆರ್ ರಶ್ಮಿ, ಕರಿಯಂಗಳ ಗ್ರಾಪಂ ಪಿಡಿಒ ನಯನಾ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಾಯ ಕಾರಂತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *