ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕೀಯರ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ನಾರಾಯಣಪ್ಪ ಸನ್ಮಾನಿಸಲಾಯಿತು ಶಿಕ್ಷಕರು ಜೀವನ ಸಮಾಜಮುಖಿ ಚಿಂತನೆಗೆ ಮೀಸಲಿರಲಿ, ಎಂದು ಡಾ//ಆರ್.ರವಿಕುಮಾರ್.ಹೇಳಿದರುIMG-20210701-WA0171ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಆಗುತ್ತಿರುವ ಪ್ರಾಂಶುಪಾಲರು ಸಮಾಜಮುಖಿ ಚಿಂತನೆಗೆ ಸಮಯ ಮೀಸಲಿರಿಸಲಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಡಾ//ಆರ್.ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣಪ್ಪ ರವರು ಜೂನ್ 30 ರಂದು ನಿವೃತ್ತಿ ಆದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿ ಮಾತಾಡಿದ ರವಿಕುಮಾರ್ ಶಿಕ್ಷಕರು ತಮ್ಮ ನಿವೃತ್ತಿಯ ನಂತರ ತಮ್ಮ ಜೀವನವನ್ನು  ಉತ್ತಮ ಸಾಮಾಜಿಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ  ಬದುಕು ಸಾರ್ಥಕತೆಪಡಿಸಿಕೊಳ್ಳಬೇಕು,ಶಿಕ್ಷಣ ರಂಗದಲ್ಲಿ ಸದೀರ್ಘ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಪ್ರಾಂಶುಪಾಲರ ನಿವೃತ್ತಿ ಜೀವನ ಪರ್ಯಂತ ಸುಖವಾಗಿರಲಿ ಎಂದು ಕೋರಿದರು. ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಸಿ.ಎಂ.ಚಂದ್ರು, ನಿವೃತ್ತಿ ಪ್ರಾಂಶುಪಾಲ ಎಂ.ವಿ.ಬಷಿರ್, ಉಪನ್ಯಾಸಕರಾದ  ವಾಸು,ಗೋಪಿನಾಥ್, ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *