ಬಂಟ್ವಾಳ : ತಾಲ್ಲೂಕಿನ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ ಪೌರೋಹಿತ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಇಲ್ಲಿನ ಕಲ್ಲಡ್ಕ ಸಮೀಪದ ಕಶೆಕೋಡಿ ಎಂಬಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ ವೇದಾಧ್ಯಯನ ಮಾಡಿ ತಂದೆಯೊಂದಿಗೆ ಪೌರೋಹಿತ್ಯ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಆ ಮೂಲಕ ವೇದಾಧ್ಯಯನ ಮತ್ತು ಪೌರೋಹಿತ್ಯ ಕೇವಲ ಪುರುಷರಿಗೆ ಮಾತ್ರ ಎಂಬ ಅಘೋಷಿತ ನಿಯಮಕ್ಕೆ ಬದಲಾಗಿ ಈಕೆ ಸ್ವಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.28btl-btl-Kashekodiಕಶೆಕೋಡಿ ಎಂದರೆ ಪುರೋಹಿತ ಮತ್ತು ವೈದಿಕ ಮನೆತನ ಹಿನ್ನೆಲೆ ಹೊಂದಿರುವ ಕುಟುಂಬ. ಈ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತಿದ್ದು, ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಹಲವು ಮಂದಿ ಬಾಲಕರು ಬರುತ್ತಾರೆ. ಈ ನಡುವೆ ತನ್ನ ಸಹೋದರ ಆದಿತ್ಯ ಕೃಷ್ಣನ ಜೊತೆಗೆ ವೇದಾಧ್ಯಯನ ನಡೆಸಲು ನನಗೂ ಅವಕಾಶ ನೀಡಬೇಕು ಎಂದು ಪುತ್ರಿ ಅನಘಾ ಬೇಡಿಕೆಯಂತೆ ತಂದೆ ಸೂರ್ಯನಾರಾಯಣ ಭಟ್ಟರು ಸಂತೋಷದಿಂದಲೇ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ನನಗೆ ಪೌರೋಹಿತ್ಯ ನಡೆಸುವ ಬಗ್ಗೆ ಯಾವುದೇ ಇಚ್ಛೆ ಇಲ್ಲ. ಆದರೆ ತಂದೆಯೊಂದಿಗೆ ಮದುವೆ ಮತ್ತಿತರ ಪೌರೋಹಿತ್ಯ ನಡೆಸುವಷ್ಟು ಸಾಮರ್ಥ್ಯ ಹೊಂದಿರುವುದಾಗಿ ಅನಘಾ ಪ್ರತಿಕ್ರಿಯಿಸಿದ್ದಾರೆ.

ವೇದಾಧ್ಯಯನ ತರಬೇತಿಯಲ್ಲಿ ಅನಘಾ ಸಂಪೂರ್ಣ ತೊಡಗಿಸಿಕೊಂಡಿರುವುದನ್ನು ಕಂಡ ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅವರು ನೀಡಿದ್ದ ಪ್ರೋತ್ಸಾಹ ಇತರ ಹೆಣ್ಮಕ್ಕಳಿಗೆ ಪ್ರೇರಣೆಯಾಗುವಂತೆ ಮಾಡಿದೆ ಎಂದು ಅನಘಾಳ ತಂದೆ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *