ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಎದುರು ವಿವಿಧ ಕಾರ್ಮಿಕ ಚಳವಳಿ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ಬಿ.ಸಿ.ರೋಡು ‘ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ’ ಪ್ರತಿಭಟನೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರಾದ್ಯಂತ ವಿವಿಧ ರೈತ ಸಂಘಟನೆ ಮತ್ತು ಕಿಸಾನ್ ಮೋರ್ಚಾ ಸಹಿತ ದಲಿತ, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ ಎಂದು ರೈತ ಸಂಘದ ಜಿಲ್ಲಾದ್ಯಕ್ಷ ಒಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ಹೇಳಿದ್ದಾರೆ.28BTL-RAITHAಇಲ್ಲಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಎದುರು ವಿವಿಧ ಕಾರ್ಮಿಕ ಚಳವಳಿ ಒಕ್ಕೂಟದಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಿಐಟಿಯು ಜಿಲ್ಲಾ ಕರ‍್ಯದರ್ಶಿ ರಾಮಣ್ಣ ವಿಟ್ಲ, ರೈತ ಸಂಘದ ಬಾಳ್ತಿಲ ವಲಯ ಅಧ್ಯಕ್ಷ ಸುರೇಂದ್ರ ಕೊರ್ಯ, ಉಪಾಧ್ಯಕ್ಷ ಆಲ್ವಿನ್ ಲೋಬೋ, ಡೇನಿಯಲ್ ಎವರೆಸ್ಟ್ ಫ್ರ‍್ರಾಂಕ್, ಡಿವೈಎಫ್‌ಐ ಮುಖಂಡ ತುಳಸೀದಾಸ್ ವಿಟ್ಲ, ಮೋಜೇಶ್ ಪೂಜಾರಿ, ಲಿಯಾಕತ್ ಖಾನ್, ತಾಬೀಸ್ ವಿಟ್ಲ, ದಿನೇಶ್ ಆಚಾರಿ ಮಾಣಿ, ಸದಾನಂದ ಶೀತಲ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *