ಬಂಟ್ವಾಳ : ತಾಲ್ಲೂಕಿನ ವೀರಕಂಭ ಸಮೀಪದ ಶ್ರೀ ಗುಡ್ಡೆ ಚಾಮುಂಡಿ ಪಂಜುರ್ಲಿ – ಮಲೆಕೊರತಿ ದೈವಗಳ ಚಾವಡಿ ದಾಸಗದ್ದೆ ಕಂಬಳ ಗದ್ದೆ ಬಳಿ ಶಿಲಾಶಾಸನವೊಂದು ಪತ್ತೆಯಾಗಿದೆ. ಬಂಟ್ವಾಳ ಇಲ್ಲಿನ ವೀರಕಂಭ ಸಮೀಪದ ಶ್ರೀ ಗುಡ್ಡೆ ಚಾಮುಂಡಿ ಪಂಜುರ್ಲಿ – ಮಲೆಕೊರತಿ ದೈವಗಳ ಚಾವಡಿ ದಾಸಗದ್ದೆ ಕಂಬಳ ಗದ್ದೆ ಬಳಿ ಶಿಲಾಶಾಸನವೊಂದು ಪತ್ತೆಯಾಗಿದೆ.
ಇತಿಹಾಸದ ಮೇಲೆ ಬೆಳಕು ಚೆಲ್ಲುವ ಈ ಅಪೂರ್ವ ಶಿಲಾಶಾಸನ ಬಗ್ಗೆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರನ ಚಿತ್ರಗಳ ನಡುವೆ ಶಿವಲಿಂಗದ ಚಿತ್ರವಿದೆ. ಅಸ್ಪಷ್ಟವಾಗಿ ಕಾಣಿಸುತ್ತಿರುವ ಬರಹಗಳ ಬಗ್ಗೆ ಇತಿಹಾಸ ತಜ್ಞರು ಮಾಹಿತಿ ನೀಡಬೇಕಾಗಿದ್ದು, ಯಾರಿಗೂ ಅರ್ಥವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ದಾನ ನೀಡಿದ ಜಮೀನಿಗೆ ಗುರುತಿಸುವ ಕಲ್ಲು ಇದು ಎಂಬ ಮಾತು ಕೂಡಾ ಕೇಳಿ ಬಂದಿದೆ.
