Published On: Tue, Jun 22nd, 2021

ಮಲಬಾರ್ ಗೋಲ್ಡ್ ಕಂಪನಿ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

 ಬಂಟ್ವಾಳ: ಮಲಬಾರ್ ಗೋಲ್ಡ್ ಕಂಪನಿ ವತಿಯಿಂದ ಮಾಣಿ ಶಕ್ತಿ ಕೇಂದ್ರದ ನೇತ್ರತ್ವದಲ್ಲಿ ಅಂಗನವಾಡಿ ಕಾರ್ಯಕರ್ತಯರು, ಆಶಾ ಕಾರ್ಯಕರ್ತೆ ಯರು, ಹಾಗೂ ಆರ್ಥಿಕ ವಾಗಿ ಸಂಕಷ್ಟದಲ್ಲಿರುವ ಐದು ಗ್ರಾಮದ ಫಲಾನುಗಳಿಗೆ ದಿನಬಳಕೆಯ ಆಹಾರ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮ ವೀರಕಂಭ ಗ್ರಾಮದ ಕೆಲಿಂಜ ಶ್ರೀ ನಿಕೇತನ ಮಂದಿರದಲ್ಲಿ ಮಂಗಳವಾರ ಬೆಳಿಗ್ಗೆ ನಡೆಯಿತು.525b1d91-a328-4418-87c2-b1c1cb2353be

ಕಿಟ್ ವಿತರಣೆ ನಡೆಸಿದ ಬಂಟ್ಚಾಳ ಬಿಜೆಪಿ ಆಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಸರಕಾರದ ನಿಯಮದ ಜೊತೆ ಗ್ರಾಮದ ಪ್ರತಿಯೊಬ್ಬರ ಸಹಕಾರದಿಂದ ಕೊರೊನಾ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು.ಆದರೆ ಕೊರೊನಾ ಸಂಕಷ್ಟದ ದಿನಗಳಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಬಡಜನರ ಸೇವೆ ಮಾಡಿ ಅನೇಕರು ಪುಣ್ಯ ಕಟ್ಟಿಕೊಂಡಿದ್ದಾರೆ.

85a73d53-7c5f-4cfb-aa5b-1196391f3553
ಈ ದಿನ ಮಲಬಾರ್,ಗೋಲ್ಡ್ ಹಾಗೂ ಮಾಣಿ ಬಿಜೆಪಿ ಶಕ್ತಿ ಕೇಂದ್ರ ಇಂತಹ ಜನಪರ ಕಾರ್ಯಕ್ರಮ ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು.ಬಂಟ್ವಾಳ ಕ್ಷೇತ್ರದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ಕೊರೊನಾ ಸೊಂಕಿತರ ಪ್ರತಿ ಮನೆಗೆ ಕಿಟ್ ನೀಡುವ ಕೆಲಸ ಆಗಿದೆ ಅದರ ಜೊತೆಯಲ್ಲಿ ಅರ್ಥಿಕ ವಾಗಿ ಬಡವರಾಗಿದ್ದು ಸಂಕಷ್ಟದ ಲ್ಲಿರುವ ಅನೇಕ ಮನೆಗಳಿಗೆ ಸಹಾಯ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ನ ಮ್ಯಾನೇಜರ್ ಶೇಖ್ ಪರ್ಹನ್ , ವೀರಕಂಭ ಗ್ರಾ‌ಪಂ ಅದ್ಯಕ್ಷ ದಿನೇಶ್, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅದ್ಯಕ್ಷ ರೇಶ್ಮಾಶಂಕರ್, ಅನಂತಾಡಿ ಗ್ರಾಮ ಪಂಚಾಯತ್ ಅದ್ಯಕ್ಷ ಗಣೇಶ್ ನೆಟ್ಲಮುಡ್ನೂರು ಗ್ರಾ‌ಪಂ ಅದ್ಯಕ್ಷ ಸತೀಶ್,ಉಪಾಧ್ಯಕ್ಷ ನಾಗೇಶ್ ಶೆಟ್ಟಿ,ಬಿಜೆಪಿ ಪ್ರಮುಖರಾದ ಸಂದೇಶ ಶೆಟ್ಟಿ ,ರವೀಶ್ ಶೆಟ್ಟಿ ಕರ್ಕಳ, ಪುಷ್ಪರಾಜ ಶೆಟ್ಟಿ ಮಾಣಿ, ಚಂದ್ರಶೇಖರ್ ಕಲ್ಮಲೆ, ವಿಷ್ಣು ಭಟ್ ಅಡ್ಯೆಯಿ,ಕೊರಗಪ್ಪ ಗೌಡ ಅಡ್ಯೆಯಿ, ಜಯಪ್ರಸಾದ್, ಸಂದೀಪ್, ಗೀತಾಚಂದ್ರಶೇಖರ್, ಜಯಂತಿ, ರಮನಾಥ ರಾಯಿ, ಸನತ್ ರೈ ಅನಂತಾಡಿ, ಮೋನಪ್ಪ ದೇವಸ್ಯ ಮತ್ತಿತರರು ಉಪಸ್ಥಿತರಿದ್ದರು.ನಾಗೇಶ್ ಭಂಡಾರಿ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter