ಮೂಡುಬಿದಿರೆ: ವರದಕ್ಷಣಾ ಕಿರುಕುಳ ನೀಡಿ ಕೊಲೆ ಬೆದರಿಕೆಯೊಡ್ಡಿ ವಿವಾಹಿತನೋರ್ವ ಪರಾರಿಯಾಗಿದಾನೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಚ್ಚೇರಿಪೇಟೆ ನಿವಾಸಿ ಸೂರಜ್ ಪ್ರಕರಣದ ಆರೋಪಿ. ಈತ ಕಳೆದ ಎಂಟು ವರ್ಷಗಳ ಹಿಂದೆ ಯುವತಿಯೋರ್ವಳನ್ನು ಮದುವೆಯಾಗಿದ್ದು, ವರದಕ್ಷಿಣೆ ರೂಪದಲ್ಲಿ ಎಂಟು ಪವನ್ ಚಿನ್ನ ಪಡೆದಿದ್ದ ಎನ್ನಲಾಗಿದೆ.

ಆ ಬಳಿಕ ಸೂರಜ್ ಮತ್ತು ಆತನ ಮನೆಯವರು ಆತನ ಪತ್ನಿಗೆ ನಿರಂತರ ಕಿರುಕುಳ ನೀಡಿದ್ದು, ಆಕೆಯ ಮನೆಯವರಿಂದ ಒಂದು ಸೈಟ್‌ನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಲಾಗಿದೆ. ಆರೋಪಿ ಮೂಡುಬಿದಿರೆ ಪ್ರಾಂತ್ಯ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೂರು ತಿಂಗಳಿನಿಂದ ಪತ್ನಿ ಮತ್ತು ಮಗುವನ್ನು ಬಿಟ್ಟು ಹೋಗಿರುವುದಾಗಿ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಆರೋಪಿ ಸೂರಜ್, ಆತನ ತಾಯಿ, ತಮ್ಮ, ತಮ್ಮನ ಹೆಂಡತಿ ಮತ್ತು ತಂಗಿ ವಿರುದ್ದ ಮೂಡುಬಿದಿರೆ ಠಾಣೆಯಲ್ಲಿ ವರದಕ್ಷಣೆ ಕಿರುಕುಳ, ಕೊಲೆ ಬೆದರಿಕೆ ಸಹಿತ ಹಲವು ಪ್ರಕರಣಗಳಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *