Published On: Mon, Jun 21st, 2021

ಹೊಲಗಳನ್ನು ಹಡೀಲು ಬಿಡದೆ ಭತ್ತ ಬೆಳೆಯಿರಿ:ಭರತ್ ಶೆಟ್ಟಿ. 

ಕೈಕಂಬ: ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯುವ ರೈತರಿಗೆ  ಅಗತ್ಯವಾದ ಸವಲತ್ತುಗಳನ್ನು  ಸರಕಾರ  ನೀಡಲಿದೆ. ಇದರ ಪ್ರಯೋಜನವನ್ನು ಪಡೆದುಕೊಂಡು ಹೊಲಗಳನ್ನು ಹಡೀಲು ಬಿಡದೆ   ” ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ” ಯೋಜನೆ ಯಶಸ್ವಿಗೊಳಿಸಬೇಕು ಎಂದು ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿದರು.

20210618_160036ಅವರು ಎಡಪದವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮುಚ್ಚೂರು, ಕುಪ್ಪೆಪದವು, ಮುತ್ತೂರು, ತೆಂಕ ಎಡಪದವು ಮತ್ತು ಬಡಗ ಎಡಪದವು  ಪಂಚಾಯತ್ ಗಳ  ವ್ಯಾಪ್ತಿಯ ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರೈತರು ದೇಶದ ಬೆನ್ನೆಲುಬು, ರೈತರು ಗದ್ದೆಗಳನ್ನು  ಹಡೀಲು ಬಿಡದೆ ಭತ್ತ ಬೆಳೆದು ತಾವೂ ಗಟ್ಟಿಯಾಗುವುದರ ಜತೆಗೆ ದೇಶವನ್ನೂ ಗಟ್ಟಿಗೊಳಿಸಬೇಕು, ಭತ್ತ ಬೆಳೆಯುವುದನ್ನು ಕೈಬಿಟ್ಟರೆ ಅನ್ನಕ್ಕಾಗಿ ಪರದಾಡುವ ಸ್ಥಿತಿ ಒದಗಲಿದೆ ಆದುದರಿಂದ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಭತ್ತ ಬೆಳೆಯಬೇಕಾಗಿದೆ ಎಂದು  ಯೋಜನೆಯ ಬಗ್ಗೆ  ಸಮಗ್ರ ಮಾಹಿತಿ ನೀಡಿದರು.
ಸರಕಾರದ ಆದೇಶದಂತೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ  ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಅದರ ಮುಂದುವರೆದ ಭಾಗವಾಗಿ ಶುಕ್ರವಾರದ  ಸಭೆ ನಡೆಯಿತು.
ಸಭೆಯಲ್ಲಿ  ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾಗೇಶ್ ಶೆಟ್ಟಿ, ಎಡಪದವು  ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಬಡಗ ಎಡಪದವು ಪಂಚಾಯತ್ ಅಧ್ಯಕ್ಷ  ಹರೀಶ್,ಮುಚ್ಚೂರು ಪಂಚಾಯತ್ ಅಧ್ಯಕ್ಷೆ  ಮೋಹಿನಿ, ಗುರುಪುರ ಹೋಬಳಿ ಉಪ  ತಹಶೀಲ್ದಾರ್ ಶಿವಪ್ರಸಾದ್, ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ರೈ, ಕಂದಾಯ ನಿರೀಕ್ಷಕ ನವನೀತ್ ಮಾಳವ, ಪಂಚಾಯತ್ ಉಪಾಧ್ಯಕ್ಷರುಗಳು, ಸದಸ್ಯರುಗಳು, ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪಿಡಿಒಗಳು, ಪಂಚಾಯತ್ ಕಾರ್ಯದರ್ಶಿಗಳು,  ಗ್ರಾಮ ಕರಣಿಕರುಗಳು ಭಾಗವಹಿಸಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter